ಗಿರಿಜನರು ಆರ್ಥಿಕವಾಗಿ ಸಬಲರಾಗಬೇಕು: ಎಸ್.ಎನ್.ರಾಜಾರಾವ್
ಕುಶಾಲನಗರ,ಸೆ೨೬: ಗಿರಿಜನರು ಸರ್ಕಾರದ ಯೋಜನೆಗಳನ್ನು ಸದುಪಯೋಗಗೊಳಿಸಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಬಸವನಹಳ್ಳಿ ಲ್ಯಾಂಪ್ ಸೊಸೈಟಿ ಮಾಜಿ ಅಧ್ಯಕ್ಷ ಎಸ್.ಎನ್.ರಾಜಾರಾವ್ ಹೇಳಿದರು.
ಕುಶಾಲನಗರದ ಬಸವನಹಳ್ಳಿಯಲ್ಲಿ ಗಿರಿಜನ ಕಲ್ಯಾಣ ಇಲಾಖೆಯಿಂದ ಸರ್ಕಾರದ ಸಹಾಯ ಧನ ಪಡೆದು ತೆರೆಯಲ್ಪಟ್ಟ, ನೂತನ ದಿನಸಿ ಅಂಗಡಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಿರಿಜನರು ಆರ್ಥಿಕವಾಗಿ ಸಬಲರಾಗಲು ಸರ್ಕಾರ ಹಲವು ಯೋಜನೆಗಳನ್ನು ತಂದಿದೆ. ಅವುಗಳನ್ನು ಸದುಪಯೋಗ ಪಡಿಸಿ ತಮ್ಮ ಆರ್ಥಿಕ ಮಟ್ಟವನ್ನು ಉನ್ನತಿಗೊಳಿಸಿಕೊಳ್ಳಬೇಕು ಎಂದರು.
ಗಿರಿಜನ ಕಲ್ಯಾಣ ಇಲಾಖೆಯ ಹೊನ್ನೇಗೌಡ ಮಾತನಾಡಿ, ಗಿರಿಜನರ ಆರ್ಥಿಕ ಸುಧಾರಣೆಗೆ ಸರ್ಕಾರ ಹತ್ತಲವಾರು ಯೋಜನೆಗಳನ್ನು ತಂದಿದೆ. ಇವುಗಳನ್ನು ಬಳಸಿಕೊಂಡು, ಗಿರಿಜನರು ಆರ್ಥಿಕವಾಗಿ ಬೆಳೆಯಬೇಕು. ಸ್ವಾಮಿಯವರು ಜಿಲ್ಲೆಯಲ್ಲೇ ಪ್ರಥಮವಾಗಿ, ಸರ್ಕಾರದ ಎರಡು ಲಕ್ಷ ಸಹಾಯ ಧನವನ್ನು ಪಡೆದು ಮಳಿಗೆ ತೆರೆದಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರೂ ಸರ್ಕಾರದ ಸವಲತ್ತುಗಳನ್ನು ಪಡೆದು ಅಭಿವೃದ್ಧಿ ಹೊಂದಬೇಕು. ಈ ನಿಟ್ಟಿನಲ್ಲಿ ಇಲಾಖೆಯಿಂದ ಸಹಕಾರ ನೀಡಲಾಗುವುದು ಎಂದರು.
ಈ ಸಂದರ್ಭ ಸ್ವಾಮಿಯವರು ಬಸವನಹಳ್ಳಿ ಹಾಡಿಯಲ್ಲಿ ಬಳಕೆಯಲ್ಲಿಲ್ಲದ ಅಂಗನವಾಡಿಯನ್ನು ಪ್ರಾರಂಭಿಸುವಂತೆ ಗಿರಿಜನ ಕಲ್ಯಾಣ ಇಲಾಖೆಯ ಅಧಿಕಾರಿಯಾದ ಬಣ್ಣೇಗೌಡರಿಗೆ ಮನವಿ ನೀಡಿದರು.
ಈ ಸಂದರ್ಭ ಸಂಗಮ ಟಿವಿ ಮಾಲೀಕರಾದ ಮೋಹನ್ ಕುಮಾರ್ ಹಾಗೂ ಬಸವನಹಳ್ಳಿ ಹಾಡಿ ಜನರು ಇದ್ದರು.
Back to top button
error: Content is protected !!