ಕುಶಾಲನಗರ, ಸೆ 22: ಕಾವೇರಿ ಜಾತ್ರೆ ಪ್ರಯುಕ್ತ ಅಕ್ಟೋಬರ್ 14 ರಂದು ಗ್ರೀನ್ ಸಿಟಿ ಫೋರಂ ವತಿಯಿಂದ ತಲಕಾವೇರಿ ಕ್ಷೇತ್ರದಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿದೆ.
ಕಳೆದ 8 ವರ್ಷದಿಂದ ಗ್ರೀನ್ ಸಿಟಿ ಫೋರಂ ವತಿಯಿಂದ ತೀರ್ಥೋದ್ಭವಕ್ಕಿಂತ ಮುಂಚಿತವಾಗಿ ಸ್ವಚ್ಛತಾ ಕಾರ್ಯ ಹಮ್ಮಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಭಾಗಮಂಡಲದಿಂದ ತಲಕಾವೇರಿವರೆಗೆ ರಸ್ತೆಬದಿ ಸ್ವಚ್ಛತಾ ಕಾರ್ಯ ನಡೆಯಲಿದೆ.
14 ರಂದು ಬೆಳಗ್ಗೆ ೧೦ ಗಂಟೆಗೆ ಸ್ವಚ್ಛತಾ ಕಾರ್ಯ ಆರಂಭವಾಗಲಿದೆ. ಗ್ರೀನ್ ಸಿಟಿ ಫೋರಂ ಜತೆಗೆ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆಂದು ಫೋರಂ ಅಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರೀನ್ ಸಿಟಿ ಫೋರಂನ ಕರೆಗೆ ಸ್ಥಳೀಯರು, ಸಾರ್ವಜನಿಕ ಸಂಘ & ಸಂಸ್ಥೆಗಳು ಕೈಜೋಡಿಸಬಹುದು. ಸ್ವಚ್ಛತಾ ಕಾರ್ಯದ ಜತೆಗೆ ಸಾರ್ವಜನಿಕರು ಹಾಗೂ ತಲಕಾವೇರಿಗೆ ಬರುವ ಭಕ್ತರಿಗೆ ಕ್ಷೇತ್ರದ ಪಾವಿತ್ರ್ಯತೆ ಮತ್ತು ಪರಿಸರದ ಸ್ವಚ್ಛತೆ ಕಾಪಾಡುವ ಬಗ್ಗೆ ಅರಿವು ಮೂಡಿಸಲಾಗುವುದೆಂದು ಮಾಹಿತಿ ನೀಡಿದ್ದಾರೆ.
Back to top button
error: Content is protected !!