ಕುಶಾಲನಗರ, ಸೆ 14: ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಕಳ್ಳಿಕೊಪ್ಲು ಗ್ರಾಮದ ಅಕ್ಕಯ್ಯಮ್ಮ ಎಂಬುವವರ ಜಮೀನಿನ ಬದುವಿನಲ್ಲಿರುವ ಬೇವಿನ ಮರದಲ್ಲಿ ಅಪರಿಚಿತ ಪುರುಷನ ಶವವು ನೇಣು ಬಿಗಿದ ಸ್ಥಿತಿಯಲ್ಲಿ ಸೆ.೧೨ರಂದು ಪತ್ತೆಯಾಗಿದೆ.
ಈ ಸಂಬಂಧ ಜಮೀನು ಮಾಲಿಕರ ಪುತ್ರ ಪುಟ್ಟರಾಜು ಎಂಬುವವರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿರುವಂತೆ ತಮ್ಮ ಜಮೀನಿನಲ್ಲಿರುವ ಬೇವಿನ ಮರದಲ್ಲಿ ಅಪರಿಚಿತ ವ್ಯಕ್ತಿ ನೇಣು ಹಾಕಿಕೊಂಡಿದ್ದಾರೆಂದು ದೂರು ನೀಡಿದ್ದಾರೆ. ಶವವನ್ನು ಕೆ.ಆರ್.ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದ್ದು, ಇವರ ಬಗ್ಗೆ ಮಾಹಿತಿ ಉಳ್ಳವರು ಗ್ರಾಮಾಂತರ ಠಾಣೆ ಪೊಲೀಸರನ್ನು ಸಂಪರ್ಕಿಸುವಂತೆ ಇನ್ಸ್ಪೆಕ್ಟರ್ ಸಿ.ವಿ.ರವಿ. ಮನವಿ ಮಾಡಿದ್ದಾರೆ.
ಚಹರೆ: ಮೃತರಿಗೆ ಸುಮಾರು ೫೫-೬೦ ವರ್ಷ ವಯಸ್ಸಾಗಿದ್ದು. ಸಣಕಲು ಶರೀರ, ಕೋಲು ಮುಖ,ಕಪ್ಪುಬಣ್ಣದ ಸ್ವೆಟರ್, ತುಂಬುತೋಳಿನ ಆಕಾಶ ನೀಲಿ ಬಣ್ಣದ ಷರ್ಟ್, ಕಪ್ಪು ಬಣ್ಣದ ನಿಕ್ಕರ್ ಹಾಗೂ ನೀಲಿ ಬಣ್ಣದ ಚೌಕುಳಿ ಇರುವ ಲುಂಗಿ ಧರಿಸಿದ್ದು, ಮಾಹಿತಿ ಇದ್ದವರು ೦೮೨೨೨-೨೫೨೦೪೨ ಅಥವಾ ೯೪೮೦೮೦೫೦೫೬ಗೆ ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
Back to top button
error: Content is protected !!