ಚುನಾವಣೆ

ಕುಶಾಲನಗರ ನಾಡಪ್ರಭು ಪತ್ತಿನ ಸಹಕಾರ ಸಂಘದ ಚುನಾವಣೆ: ಎಂ.ಕೆ. ದಿನೇಶ್ ನಾಯಕತ್ವದಲ್ಲಿ ಸ್ಪರ್ಧೆ

ಕುಶಾಲನಗರ, ಅ 12: ಕುಶಾಲನಗರದ ನಂ. 38185 ನೇ ನಾಡಪ್ರಭು ಪತ್ತಿನ ಸಹಕಾರ ಸಂಘ ನಿಯಮಿತದ 2026 ನೇ ಸಾಲಿನ ಆಡಳಿತ ಮಂಡಳಿ ಚುನಾವಣೆ ದಿನಾಂಕ: 24-10-2026 ಶನಿವಾರ ಬೆಳಗ್ಗೆ 9.00 ರಿಂದ ಸಂಜೆ 4.00 ರವರೆಗೆ ರೈತ ಸಹಕಾರ ಭವನದಲ್ಲಿ ನಢಯಲಿದೆ. ಸಂಘದ ಹಾಲಿ ಅಧ್ಯಕ್ಷ ಎಂ.ಕೆ ದಿನೇಶ್ ನಾಯಕತ್ವದ ಅಭ್ಯರ್ಥಿಗಳ ತಂಡ ಮತಯಾಚನೆ ಆರಂಭಿಸಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ತಮ್ಮ ತಂಡದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ ಪತ್ರ ಬಿಡುಗಡೆ ಮಾಡಲಾಯಿತು.

ಸಂಘದ ಏಳಿಗೆಗಾಗಿ ಶ್ರಮಿಸಲು ಬದ್ಧರಾಗಿರುವ ತಮಗೆ ಮತದಾರರು ತಮ್ಮ ಅಮೂಲ್ಯ ಮತ ನೀಡಿ ತಮ್ಮ ತಂಡದ ಎಲ್ಲಾ ಅಭ್ಯರ್ಥಿಗಳನ್ನು ಜಯಶೀಲರನ್ನಾಗಿ ಮಾಡಿ ಸೇವೆ ಸಲ್ಲಿಸಲು ಅವಕಾಶ ನೀಡಬೇಕೆಂದು ಅಭ್ಯರ್ಥಿಗಳು ವಿನಂತಿಸಿದ್ದಾರೆ.

ಎಂ.ಕೆ.ದಿನೇಶ್ ಅವರ ತಂಡದಲ್ಲಿ ನಾಗೇಶ್ ಸಿ.ವಿ, ಜಗದೀಶ್ ಜಿ.ಬಿ , ಹೇಮಕುಮಾರ್ ಕೆ.ಕೆ, ಜೈರಾಜ್ ವಿ.ಬಿ, ನಂಜುಂಡ ಎಂ.ಆರ್, ಮಂಜುನಾಥ್ ಕೆ.ಎನ್, ರಮೇಶ್ ಎ.ಎನ್, ರಮ್ಯ ಹೆಚ್.ವಿ ಮತ್ತು ಮಲ್ಲಿಗೆ ಕೆ.ಟಿ ಸ್ಪರ್ಧಾ ಕಣದಲ್ಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!