ಕುಶಾಲನಗರ, ಸೆ 16: ಕೂಡಿಗೆಯ ಮುಹಿಯ್ಯದ್ಧಿನ್ ಜುಮಾ ಮಸೀದಿ ವತಿಯಿಂದ ಈದ್ ಮಿಲಾದ್ ಹಬ್ಬದ ಅಂಗವಾಗಿ ಮಿಲಾದ್ ಸಂದೇಶ ಜಾಥಾವು ಕೂಡಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು.
ಕೂಡಿಗೆ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ಸಮುದಾಯ ಬಾಂಧವರು ಮಿಲಾದ್ ಸಂದೇಶ ಜಾಥಾ ನಡೆಸಿದರು. ಕೂಡಿಗೆ ವೃತ, ಡೈರಿ ಸರ್ಕಲ್ ಮೂಲಕ ಸಾಗಿ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ತಮ್ಮ ದಫ್ ಕಲೆಯನ್ನು ಪ್ರದರ್ಶನ ಮಾಡಿದರು.
ಈ ಸಂದರ್ಭ ಮಸೀದಿ ಕಮಿಟಿಯ ಅಧ್ಯಕ್ಷ ಯೂಸಫ್, ಕಾರ್ಯದರ್ಶಿ ಮಹಮ್ಮದ್ ಅಲಿ, ಗ್ರಾಮ ಪಂಚಾಯತಿ ಸದಸ್ಯ ಟಿ.ಪಿ. ಹಮೀದ್, ಪ್ರಮುಖರಾದ ಉದ್ಯಮಿ ಖಾದರ್, ಅಜೀಜ್, ಅಶ್ರಫ್, ರಜಾಕ್ ಸೇರಿದಂತೆ ಸಮುದಾಯದ ನೂರಾರು ಯುವಕರು ಮತ್ತು ಮದರಸ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದೇ ಸಂದರ್ಭ ಕೂಡಿಗೆಯ ಹನುಮ ಸೇವಾ ಸಮಿತಿಯ ವತಿಯಿಂದ ತಂಪು ಪಾನೀಯ ವಿತರಣೆ ಮಾಡಲಾಯಿತು.
Back to top button
error: Content is protected !!