ಕಾರ್ಯಕ್ರಮ

ಕುಶಾಲನಗರದ ವಿವೇಕಾನಂದ ಪಿಯು‌ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಣೆ

ಕುಶಾಲನಗರ, ಆ 29 ಕುಶಾಲನಗರದ ವಿವೇಕಾನಂದ ಪಿಯು‌ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಯಿತು.

ಅತಿಥಿಯಾಗಿ ಪಾಲ್ಗೊಂಡಿದ್ದ ಕೊಡಗಿನ ಕ್ರೀಡಾ ವಿಶ್ಲೇಷಣೆಗಾರ ಚಪ್ಪುಡೀರ ಕಾರ್ಯಪ್ಪ ಅವರು ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೇಜರ್ ಧ್ಯಾನ್ ಚಂದ್ ರವರ ಜೀವಮಾನದ ಸಾಧನೆ ಬಗ್ಗೆ ಉಪನ್ಯಾಸ ನೀಡಿದರು.
ರಾಷ್ಟ್ರ ಪ್ರೇಮ ಹಾಗೂ ಒಲಂಪಿಕ್ ನಲ್ಲಿ ಧ್ಯಾನ್ ಚಂದ್ ಗಳಿಸಿದ ಗೆಲುವುಗಳು, ಆಟದ ಮೈದಾನದಲ್ಲಿ ಮಿಂಚಿನ ವೇಗದಲ್ಲಿ ಗಳಿಸಿದ ಗೋಲುಗಳ ಬಗ್ಗೆ ವಿದ್ಯಾರ್ಥಿ ಗಳಿಗೆ ಮನಮುಟ್ಟುವ ರೀತಿಯಲ್ಲಿ ತಿಳಿಸಿದರು. ಕೊಡಗಿನ ಮಕ್ಕಳಲ್ಲಿ ಇತ್ತೀಚೆಗೆ ಹಾಕಿ ಕ್ರೀಡೆಯ ಆಸಕ್ತಿ ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈಗಿನ ಯುವಕರು ಮೊಬೈಲ್ ಬಳಸುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ದೈಹಿಕ ಸಾಮರ್ಥ್ಯ ಕುಂದುವುದು ಶತಸಿದ್ಧ ಎಂದು‌ ಎಚ್ಚರಿಸಿದರು.
ಇದೇ ಸಂದರ್ಭ ಸಂಸ್ಥೆ ವತಿಯಿಂದ ಕಾರ್ಯಪ್ಪ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜು ಉಪ ಪ್ರಾಂಶುಪಾಲ ವಿಕ್ರಂ ಹಾಗೂ ಕಚೇರಿ ಆಡಳಿತಾಧಿಕಾರಿ ಮಹೇಶ್ ಅಮೀನ್, ಉಪನ್ಯಾಸಕಿ ಮೇರಿ ಪ್ರಿಯಾ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!