ಕುಶಾಲನಗರ, ಸೆ.01: ನಾಲೆಯಲ್ಲಿ ಬಟ್ಟೆ ಒಗೆಯಲು ಹೋಗಿದ್ದ ಮಹಿಳೆ ತಲೆ ಸುತ್ತು ಬಂದು ನಾಲೆ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶಿವಣ್ಣ ನಾಯಕರ ಪತ್ನಿ ಜಯಮ್ಮ(61)ಎಂಬುವವರೇ ಮೃತಪಟ್ಟ ದುರ್ದೈವಿ.
ಘಟನೆಯ ವಿವರ:- ಗ್ರಾಮದ ಬಳಿಯ ತುಂಬು ಹರಿಯುತ್ತಿರುವ ಹಾರಂಗಿ ನಾಲೆಯ ಉಪಕಾಲುವೆಯಲ್ಲಿ ಗಣೇಶ ಹಬ್ಬದ ದಿನದಂದು ಬಟ್ಟೆ ಒಗೆಯಲು ಹೋಗಿದ್ದ ವೇಳೆ ತಲೆಸುತ್ತಿನಿಂದ ನೀರಿಗೆ ಬಿದ್ದು ಅಲ್ಲೇ ಸಾವನ್ನಪ್ಪಿದ್ದಾರೆ. ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಮನೆಯವರು ಬಿಸಲಿಗೆ ಬಟ್ಟೆ ಒಣಗಿಸಿಕೊಂಡು ಬರಬಹುದೆಂದು ಇದ್ದರು. ಆದರೆ ಸಂಜೆ ವೇಳೆಗೆ
ದಾರಿಹೋಕರು ನಾಲೆಯಲ್ಲಿ ಬಟ್ಟೆ ತೇಲುತ್ತಿದ್ದ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿದ ಮೇರೆಗೆ ಮನೆಯವರು ಹೋಗಿ ನೋಡಿದ ವೇಳೆ ಜಯಮ್ಮನವರ ಶವ ತೇಲುತ್ತಿತ್ತು. ಗ್ರಾಮಸ್ಥರ ನೆರವಿನಿಂದ ಕುಟುಂಬದವರು ಶವ ಮೇಲೆತ್ತಿದ ನಂತರ ಅಂತ್ಯ ಸಂಸ್ಕಾರ ನಡೆಸಿದರು.
ಕುಟುಂಬಸ್ಥರ ಆಕ್ರದನ :- ಹಬ್ಬಕ್ಕೆ ಬಂದಿದ್ದ ನೆಂಟರಿಷ್ಟರು ಹಾಗೂ ಗ್ರಾಮಸ್ಥರು ನಾಲೆಯಲ್ಲಿ ಜಯಮ್ಮ ಕಣ್ಣೀರು ಹಾಕಿದರು. ಗಣಪತಿ ಹಬ್ಬದ ಸಡಗರದಲ್ಲಿದ್ದ ಮನೆಮಂದಿಯ ಆಕ್ರಂದನ ಮುಗಿಲು ಮುಟ್ಟಿತ್ತು.
ಇವರಿಗೆ ಪತಿ. ಓರ್ವ ಪುತ್ರ ಇಬ್ಬರು ಪುತ್ರಿಯರಿದ್ದಾರೆ.
Back to top button
error: Content is protected !!