ಆರೋಪ

ಜಾತಿ ಪ್ರಮಾಣಪತ್ರ ರದ್ದತಿಗೆ ಒತ್ತಾಯ: ನ್ಯಾಯಾಂಗ ನಿಂದನೆ‌ ಪ್ರಕರಣ ದಾಖಲಿಸಲಾಗುವುದು: ಅರುಣ್ ರಾವ್

ಕುಶಾಲನಗರ, ‌ಮೇ 21: ದಿ.ಎಸ್.ಎನ್.ರಾಜಾರಾವ್ ಅವರ‌ ಮಕ್ಕಳು ಫೋರ್ಜರಿ ಮೂಲಕ ಪ.ಪಂಗಡದ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಜಾತಿ ಪ್ರಮಾಣಪತ್ರ ರದ್ದತಿಗೆ ಒತ್ತಡ ಹೇರುತ್ತಿರುವ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ಲ್ಯಾಂಪ್ಸ್ ಮಹಾಮಂಡಳ ಅಧ್ಯಕ್ಷ ಎಸ್.ಆರ್.ಅರುಣ್ ರಾವ್ ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.

ಭಾರತ ಸಂವಿಧಾನದ ಪ್ರಕಾರ ಕೊಡಗು ಜಿಲ್ಲೆಯಲ್ಲಿ ಮಾತ್ರ ಪರಿಶಿಷ್ಠ ಪಂಗಡಕ್ಕೆ ಸೇರಿದ ಮರಾತ ಜನಾಂಗದ ದಿವಂಗತ ರಾಜಾರಾವ್‌ ಕುಟುಂಬದ ಜಾತಿ ಪ್ರಮಾಣ ಪತ್ರ ರದ್ದಿಗೆ ಕಾನೂನು ಬಾಹಿರವಾಗಿ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದು ಅಂತಹವರ ವಿರುದ್ದ ನ್ಯಾಯಾಂಗ ನಿಂದನೆ ಕಾಯ್ದೆ ಅಡಿಯಲ್ಲಿ ಕ್ರಮಕ್ಕೆ ಆಗ್ರಹಿಸಲಾಗುತ್ತದೆ.

ದಿವಂಗತ ಎಸ್.‌ ಎನ್‌.ರಾಜಾರಾವ್ ಜಾತಿ ವಿಚಾರಣೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಯವರ ನ್ಯಾಯಾಲಯವು ಕಾನೂನು ಕ್ರಮ ಪಾಲಿಸದೆ ಮತ್ತು ಅಧಿಕೃತ ದಾಖಲೆ ಪರಿಗಣಿಸದೆ ಮಾಡಿದ್ದ ಆದೇಶದ ವಿರುದ್ದ ಅರುಣ್‌ ರಾವ್‌ ಮತ್ತು ಇತರರು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್‌ ಅರ್ಜಿ ಸಲ್ಲಿಸಿ ದಿನಾಂಕ 24-09-2025 ರಂದು ಜಿಲ್ಲಾಧಿಕಾರಿಯವರ ಆದೇಶಕ್ಕೆ ತಡೆಯಾಜ್ಞೆ ಪಡೆದಿರುತ್ತೇವೆ. ಮತ್ತು ಪ್ರಸ್ತುತ ಪ್ರಕರಣದ ಪ್ರತಿವಾದಿಗಳಾಗಿರುವ ಆರ್‌.ಕೆ.ಚಂದ್ರ, ಮಹೇಶ ಇತರರು ಈ ತಡೆಯಾಜ್ಞೆ ತೆರವಿಗೆ ಅರ್ಜಿ ಸಲ್ಲಿಸಿರುತ್ತಾರೆ. ಮಾನ್ಯ ಉಚ್ಚ ನ್ಯಾಯಾಲಯವು ಆರ್.ಕೆ ಚಂದ್ರ ರವರು ಇತರ ಪ್ರತಿವಾದಿಗಳ ಪರವಾಗಿ ಪ್ರಮಾಣ ಪತ್ರಕ್ಕೆ ಸಹಿ ಮಾಡಿ ತಮ್ಮ ವಕೀಲಯ ಮೂಲಕ ತಡೆಯಾಜ್ಞೆ ತೆರವಿಗೆ ಸಲ್ಲಿಸಿದ ಅರ್ಜಿಯ ವಿಚಾರಣೆಗೆ ಮತ್ತು ಮುಖ್ಯ ವಿಚಾರಣೆ ದಿನಾಂಕ ಮುಂದೂಡಲಾಗಿರುತ್ತದೆ.
ಈ ರೀತಿಯಾಗಿ ಅರ್ಜಿ ಸಲ್ಲಿಸಿ ಅರ್ಜಿ ಮೇಲೆ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಇರುವಾಗ ದಿನಾಂಕ 30-04-2026 ರಂದು ಪ್ರತಿವಾದಿಗಳಾದ ಆರ್‌ .ಕೆ ಚಂದ್ರ ಮತ್ತು ಮಹೇಶ ರವರು ನ್ಯಾಯಾಲಯದ ಆದೇಶ ಮರೆಮಾಚಿ, ನ್ಯಾಯಾಲಯದಲ್ಲಿ ತಡೆಯಾಜ್ಞೆ ತೆರವಿಗೆ ಸಲ್ಲಿಸಿರುವ ಅರ್ಜಿಯ ಬಗ್ಗೆ ಹೇಳದೆ, ಸುಳ್ಳು ಮಾಹಿತಿಯ ಅರ್ಜಿ ಯನ್ನು ಮಾನ್ಯ ತಹಸೀಲ್ದಾರ್‌ ರವರಿಗೆ ಸಲ್ಲಿಸಿರುತ್ತಾರೆ. ಆದ್ದರಿಂದ ಈ ರೀತಿ ನ್ಯಾಯಾಲಯದ ಆದೇಶವನ್ನು ಮರೆಮಾಚಿ ಕಾನೂನು ಬಾಹಿರವಾಗಿ ಮತ್ತು ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ನಮ್ಮ ವಿರುದ್ದ ಕ್ರಮ ಕೈಗೋಳ್ಳುವಂತೆ ಅಧಿಕಾರಿಗಳಿಗೆ ಒತ್ತಡ ಹೇರುತ್ತಿರುವವರ ವಿರುದ್ದ ಕಾನೂನು ಕ್ರಮ ಕೈಗೋಳ್ಳಲು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಪ್ರಕರಣದ 1 ಮತ್ತು 2ನೇ ಪ್ರತಿವಾದಿಗಳಾದ ಮಾನ್ಯ ತಹಸೀಲ್ದಾರ್‌ ಮತ್ತು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗಿದೆ.
ಈ ರೀತಿಯಾಗಿ ನ್ಯಾಯಾಲಯದ ಆದೇಶದ ಉಲ್ಲಂಘನೆಯ ಕೃತ್ಯ ವೆಸಗುತ್ತಿರುವ ಆರ್‌.ಕೆ. ಚಂದ್ರ, ಮಹೇಶ ಮತ್ತು ಇತರರ ವಿರುದ್ದ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಲಯದ ಆದೇಶದ ಉಲ್ಲಂಘನೆಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ನ್ಯಾಯಾಂಗ ನಿಂದನೆ ಕಾಯ್ದೆ 1971 ರ ಅಡಿಯಲ್ಲಿ ಕೂಡಲೆ ಅರ್ಜಿ ಸಲ್ಲಿಸುವುದಾಗಿ ಅರುಣ್ ರಾವ್ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!