ಕುಶಾಲನಗರ, ಮೇ 18: ದುಬಾರೆಯಲ್ಲಿ ಪ್ರವಾಸಿ ಮಹಿಳೆ ಸಾವಿಗೆ ಪರೋಕ್ಷವಾಗಿ ಅಧಿಕಾರಿ ವರ್ಗದವರು ಕಾರಣ ಎಂದು ಕರ್ನಾಟಕ ರಕ್ಷಣಾ ವೇದಿಕೆ ಹೆಚ್.ಶಿವರಾಮೇಗೌಡರ ಬಣದ ಜಿಲ್ಲಾಧ್ಯಕ್ಷ ಡಾ.ಬಿ.ಎ.ದಿನೇಶ್ ಶೆಟ್ಟಿ ಆರೋಪಿಸಿದ್ದಾರೆ.
ದೈತ್ಯಾಕಾರದ ಆನೆಗಳ ನಡುವೆ ಮಿತಿಮೀರಿದ ಪ್ರವಾಸಿಗರನ್ನು ಅಡ್ಡಾಡಲು ಬಿಡುವುದು, ಸುರಕ್ಷತಾ ಕ್ರಮಗಳಿಲ್ಲದೆ ಆನೆಗಳನ್ನು ಸ್ನಾನ ಮಾಡಿಸುವ ಪ್ರಕ್ರಿಯೆ ಯಲ್ಲಿ ಉಂಟಾಗಬಹುದಾದ ಅಪಾಯವನ್ನು ಊಹಿಸದೆ ಮುಕ್ತವಾಗಿ ಪ್ರವಾಸಿಗರ ದಂಡನ್ನು ಬಿಡುವುದೇ ಮೊದಲ ತಪ್ಪು. ಇಂತಹ ಪ್ರಕರಣಗಳು ಮರುಕಳಿಸಬಾರದು. ಆನೆಗಳ ಸಮ್ಮುಖಕ್ಕೆ ಪ್ರವಾಸಿಗರಿಗೆ ನಿಯಂತ್ರಣ ಹೇರಬೇಕು. ಸೂಕ್ತ ರೀತಿಯ ಸಿಬ್ಬಂದಿಗಳು ನಿಯೋಜಿಸಬೇಕು ಹಾಗೂ ಇಂದಿನ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆದು ತಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಅವರು ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.
Back to top button
error: Content is protected !!