ಕುಶಾಲನಗರ, ಮೇ 18: ದುಬಾರೆ ಸಾಕಾನೆ ಶಿಬಿರದಲ್ಲಿ ಇಂದು ನಡೆದ ಪ್ರವಾಸಿಯ ಆಕಸ್ಮಿಕ ಮರಣ ಅತ್ಯಂತ ದುಖಕರ ವಿಚಾರ.
ಸಾಕು ಪ್ರಾಣಿಗಳಲ್ಲಿ ಅಪಾಯಕಾರಿ ಪ್ರವೃತಿಯಲ್ಲಿ ಆನೆಗೆ ಮೊದಲ ಸ್ಥಾನ!
ಹಿಂದೆ ಹಲವಾರು ದೇವಾಲಯಗಳಲ್ಲಿ ಆನೆಗಳು ಗಾಭರಿಗೊಂಡು, ಮದ ಬಂದು ಅಥವಾ ಮಾವುತನ ಮೇಲೆ ಸಿಟ್ಟುಗೊಂಡು ಹಲವಾರು ಜನರ ಪ್ರಾಣ ತೆಗೆದಿದ್ಡು ನಮ್ಮ ಕಣ್ಣ ಮುಂದಿದೆ.
ಕೇವಲ ಕೊಡಗು ಜಿಲ್ಲೆ ಒಂದರಲ್ಲೆ ಪ್ರತಿವರ್ಷ ಹತ್ತಾರು ಜನರ ಪ್ರಾಣ ಬಲಿ ಕಾಡಾನೆಗಳಿಂದ ಆಗುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಹೀಗಿದ್ದೂ ಸಾಕಾನೆಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳದೆ ಪ್ರವಾಸಿಗರ ಜೀವದೊಂದಿಗೆ ಚೆಲ್ಲಾಟ ಆಡುವ ಅರಣ್ಯ ಇಲಾಖೆ ಮತ್ತು ಸಂಬಂದಿಸಿದ ಇಲಾಖೆಗಳು ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸಿ ಪ್ರವಾಸಿ ಹೆಣ್ಣು ಮಗಳ ಜೀವ ಬಲಿ ಪಡೆದಿವೆ.
ಇದು ಹಣ ಸಂಪಾದಿಸುವ ಭರದಲ್ಲಿ ಪ್ರವಾಸಿಗರ ಸುರಕ್ಷತೆಯನ್ನು ಕಡೆಗಳಿಸಿದ್ದರ ಫಲ!!
ಪ್ರವಾಸಿಗರು ಸಾಕು ಆನೆಯಿಂದ ಸೂಕ್ತ ಸುರಕ್ಷತಾ ಅಂತರವನ್ನು ಕಾಯ್ದುಕೊಳ್ಳಲು ತಿಳುವಳಿಕೆ ನೀಡಬೇಕಾದದ್ದು ಪ್ರವಾಸ ಏರ್ಪಡಿಸುವ ಇಲಾಖೆ ಮತ್ತು ಸಿಬ್ಬಂದಿಗಳ ಕರ್ತವ್ಯ! ಅದನ್ನು ಪಾಲಿಸದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಆನೆ ಶಿಬಿರಕ್ಕೆ ಪ್ರವಾಸಕ್ಕೆ ಬರುವ ಪ್ರವಾಸಿಗರ ಸುರಕ್ಷತೆಗೆ ಸೂಕ್ತ ಮಾರ್ಗಸೂಚಿ ನೀಡಬೇಕು. ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಪ್ರವಾಸಿಗರ ವಿಪರೀತ ಸಂಖ್ಯೆಯನ್ನು ನಿಯಂತ್ರಿಸಬೇಕು. ಸುರಕ್ಷಿತ ಎನಿಸಿದ ಸಂಖ್ಯೆಗಿಂತ ಅಧಿಕ ಪ್ರವಾಸಿಗರನ್ನು ಯಾವ ಕಾರಣಕ್ಕೂ ಕ್ಯಾಂಪ್ ಒಳಗಡೆ ಪ್ರವೇಶಿಸದಂತೆ ನೋಡಿಕೊಳ್ಳಬೇಕು. ಇಂತಹ ಮುಂಜಾಗ್ರತ ಕ್ರಮಗಳಿಂದ ಮುಂದೆ ಇಂದು ಸಂಭವಿಸಿದಂತಹ ದುರಂತಗಳಿಂದ ಪಾರಾಗುವ ಪ್ರಯತ್ನ ಮಾಡಬಹುದು ಎಂದು ಉದ್ಯಮಿ ನಾಪಂಡ ಎಂ ಮುತ್ತಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Back to top button
error: Content is protected !!