ಕುಶಾಲನಗರ, ಮೇ 17 : ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಆಶ್ರಯದಲ್ಲಿ ಕುಶಾಲನಗರದ ಗುಂಡುರಾವ್ ಬಡಾವಣೆ ಮೈದಾನದಲ್ಲಿ ನಡೆದ 21ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ವಿರಾಜಪೇಟೆಯ ಬ್ಲಾಕ್ ಕೋಬ್ರಾ ತಂಡ ಪ್ರಥಮ, ಹುಂಡಿ ಫ್ರೀಡಂ ಬಾಯ್ಸ್ ತಂಡ ದ್ವಿತೀಯ ಸ್ಥಾನ, ಟೀಂ ಎಬಿಡಿ ವಿರಾಜಪೇಟೆ ತಂಡ ಮೂರನೇ ಸ್ಥಾನ, ನೆಲ್ಲಿಹುದಿಕೇರಿ ಅಫೀಶಿಯಲ್ಸ್ ಕ್ರಿಕೆಟರ್ಸ್
ತಂಡ ನಾಲ್ಕನೇ ಸ್ಥಾನ ಪಡೆಯಿತು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ
ವಿರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್.ಪೊನ್ನಣ್ಣ ಅವರು
ಫೈನಲ್ ಪಂದ್ಯಾಟಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕ್ರೀಡಾಕೂಟಗಳನ್ನು ಯಶಸ್ವಿಯಾಗಿಸುವ ನಿಟ್ಟಿನಲ್ಲಿ ಆಯೋಜಕರ ಪರಿಶ್ರಮ ಬಹಳಷ್ಟಿರುತ್ತದೆ. ಅದರಲ್ಲೂ ನಿರಂತರವಾಗಿ 21 ವರ್ಷಗಳ ಕಾಲ ಮುಸ್ಲಿಂ ಕಪ್ ಮುಂದುವರೆಸಿಕೊಂಡು ಬಂದಿರುವುದು ಶ್ಲಾಘನೀಯ ವಿಚಾರ. ಟ್ರಸ್ಟ್ ಮನವಿಯಂತೆ ಕ್ರೀಡಾಕೂಟಕ್ಕೆ ಸರಕಾರದಿಂದ ಅಗತ್ಯ ಅನುದಾನ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.
ವಿಜೇತ ತಂಡಗಳಿಗೆ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಅವರು ಬಹುಮಾನ ವಿತರಣೆ ಮಾಡಿದರು. ನಂತರ ಮಾತನಾಡಿದ ಅವರು, ಎಲ್ಲರನ್ನೂ ಒಗ್ಗೂಡಿಸಿ ಕ್ರೀಡಾಕೂಟ ಆಯೋಜಿಸುವುದು ಸಾಹಸದ ಕೆಲಸ. ಜಿಲ್ಲೆಯ ವಿವಿಧೆಡೆಗಳ ಕ್ರೀಡಾಪಟುಗಳು, ಕ್ರೀಡಾಪ್ರೇಮಿಗಳನ್ನು ಒಟ್ಟುಗೂಡಿಸುವ ಮೂಲಕ ಕ್ರೀಡೆಯ ಜೊತೆಗೆ ಸಮುದಾಯ ಅಭಿವೃದ್ಧಿಗೆ ಚಿಂತನೆ ಹೊಂದುವುದು ಶ್ಲಾಘನೀಯ ವಿಚಾರ. ಸುದೀರ್ಘ ಇತಿಹಾಸ ಹೊಂದಿರುವ ಈ ಕ್ರೀಡಾಕೂಟಕ್ಕೆ ಅನುದಾನ ತರಲು ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಬಳಿ ನಿಯೋಗ ಕರೆದೊಯ್ಯುವ ಭರವಸೆ ನೀಡಿದರು.
ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ರಶೀದ್ ಕೆ.ಎ. ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಕುಶಾಲನಗರ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕಾಂಗ್ರೆಸ್ ಮುಖಂಡರಾದ ಯಾಕುಬ್, ಹನೀಫ್, ರುಬೀನಾ, ಯಶ್ ದೋಲ್ಪಾಡಿ, ಟಿ.ಪಿ.ಹಮೀದ್, ಮೈಸಿಕತ್ತಣ್ಣಿರ,
ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಗೌರವಾಧ್ಯಕ್ಷ ಇಸ್ಮಾಯಿಲ್, ಕುಶಾಲನಗರ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನಗರಾಧ್ಯಕ್ಷ ಎಂ.ಜೆ ಇರ್ಫಾನ್, ನಂಜರಾಯಪಟ್ಟಣ ಗ್ರಾಪಂ ಮಾಜಿ ಅಧ್ಯಕ್ಷ ಸಿ.ಎಲ್.ವಿಶ್ವ,
ಟ್ರಸ್ಟ್ ಉಪಾಧ್ಯಕ್ಷ ಅಬ್ದುಲ್ ರಜಾಕ್ ಕೆ ಎ, ಪ್ರಧಾನ ಕಾರ್ಯದರ್ಶಿ ಎಸ್.ಆದಂ,ಖಜಾಂಚಿ ಕೆ.ಎಂ.ಮುಜೀಬ್, ಕಾನೂನು ಸಲಹೆಗಾರ ಸುಫಿಯಾನ ಎಂ.ಎಂ, ನಿರ್ದೇಶಕರಾದ ಹ್ಯಾರಿಸ್ ಎನ್.ಪಿ, ರಜಾಕ್ ಎಂ.ಕೆ, ಅಶ್ರಫ್ ಪಿ.ಎ,ಬಾಷಾ ಎಂ.ಎಸ್,ಆರೀಸ್ ಎಂ.ಎಂ,ಅನೀಸ್, ಆತಿಫ್ ಮುನ್ನ ಮತ್ತಿತರರು ಇದ್ದರು.
7 ದಿನಗಳ ಕಾಲ ನಡೆದ ಟೂರ್ನಿಯಲ್ಲಿ 55 ತಂಡಗಳು ಭಾಗಿಯಾಗಿದ್ದವು.
Back to top button
error: Content is protected !!