ಕುಶಾಲನಗರ, ಮೇ 17: ಆನೆಕಾಡು ಹೆದ್ದಾರಿಯಲ್ಲಿ ಕಾಡಾನೆಯೊಂದು ಪ್ರತಿರಾತ್ರಿ ಸಂಚರಿಸುತ್ತಿದ್ದು ಶನಿವಾರ ರಾತ್ರಿ ಇಬ್ಬರು ದ್ವಿಚಕ್ರ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆನೆಕಾಡು ಮೆಟ್ನಳ್ಳ ಇಳಿಜಾರಿನಲ್ಲಿ ಹೆದ್ದಾರಿ ಮಧ್ಯದಲ್ಲಿ ಕಾಡಾನೆ ಸಾಗುತ್ತಿದ್ದ ಸಂದರ್ಭ ಮಡಿಕೇರಿ ಕಡೆಯಿಂದ ಕುಶಾಲನಗರದತ್ತ ಬೈಕ್ ನಲ್ಲಿ ಬಂದ ಸವಾರರು ಕಾಡಾನೆ ಕಂಡು ಭಯಭೀತರಾಗಿದ್ದಾರೆ. ಬೈಕ್ ಮತ್ತು ಕಾಡಾನೆ ನಡುವೆ ಅಂತರ ಕಡಿಮೆಯಿದ್ದ ಕಾರಣ ಬೈಕ್ ವಾಪಾಸ್ ತಿರುಗಿಸುವ ಸಂದರ್ಭ ಕಾಡಾನೆ ದಾಳಿಗೆ ಮುನ್ನುಗ್ಗಿ ಬಂದಿದೆ. ಕೂಡಲೆ ಬೈಕ್ ಅನ್ನು ರಸ್ತೆಯಲ್ಲಿ ಬಿಟ್ಟು ಸವಾರರಿಬ್ಬರು ಓಡಿ ತಪ್ಪಿಸಿಕೊಂಡಿರುವ ದೃಶ್ಯ ವಾಹನ ಸವಾರರ ಮೊಬೈಲ್ ನಲ್ಲಿ ಸೆರೆಯಾಗಿದೆ. ಕಾಡಾನೆ ದಾಳಿಗೆ ಮುಂದಾಗುತ್ತಿದ್ದಂತೆ ಹಿಂದೆ ಇದ್ದ ವಾಹನದವರು ಹಾರ್ನ್ ಮಾಡಿ ಕಾಡಾನೆಯನ್ನು ಬೆದರಿಸಿದ್ದಾರೆ. ಘಟನೆಯಿಂದ ಸವಾರರು ಆಘಾತಕ್ಕೆ ಒಳಗಾಗಿದ್ದು ಪ್ರತಿನಿತ್ಯ ರಾತ್ರಿ ಈ ಕಾಡಾನೆ ರಾಜಾರೋಷವಾಗಿ ಸಂಚಾರ ನಡೆಸುತ್ತಿರುವ ಕಾರಣ ಈ ಸವಾರರು ಎಚ್ಚರವಹಿಸಬೇಕು, ಯಾವುದೇ ಜೀವಹಾನಿ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಸೂಕ್ತ ಕ್ರಮವಹಿಸಬೇಕಿದೆ ಎಂದು 7ನೇ ಹೊಸಕೋಟೆ ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್ ಆಗ್ರಹಿಸಿದ್ದಾರೆ.
Back to top button
error: Content is protected !!