ಕ್ರೀಡೆ

ಸೆಸ್ಟೋಬಾಲ್ ಸಬ್ ಜೂನಿಯರ್ ನ್ಯಾಷನಲ್ ಚಾಂಪಿಯನ್ ಗಳಿಗೆ ಕುಶಾಲನಗರದಲ್ಲಿ ಭವ್ಯ ಸ್ವಾಗತ

ಕುಶಾಲನಗರ, ಮೇ 09: ಹೈದರಾಬಾದ್ ನಲ್ಲಿ ನಡೆದ ಸೆಸ್ಟೋಬಾಲ್ 4ನೇ ಸಬ್ ಜೂನಿಯರ್ ನ್ಯಾಷನಲ್ ಚಾಂಪಿಯನ್‌ಶಿಪ್ ನಲ್ಲಿ ಚಾಂಪಿಯನ್ ಗಳಾಗಿ ಚಿನ್ನದ ಪದಕ‌ ಬೇಟೆಯಾಡಿದ ಕರ್ನಾಟಕದ ಬಾಲಕ ಮತ್ತು ಬಾಲಕಿಯರ ತಂಡಕ್ಕೆ ಕುಶಾಲನಗರದಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಕ್ರೀಡಾಕೂಟ ಮುಗಿಸಿ ಜಿಲ್ಲೆಗೆ ಆಗಮಿಸಿದ ತಂಡಕ್ಕೆ ಕುಶಾಲನಗರ-ಕೊಪ್ಪ ಗಡಿ ಕಾವೇರಿ ಪ್ರತಿಮೆ ಬಳಿ ಕ್ರೀಡಾಭಿಮಾನಿಗಳು ಅದ್ದೂರಿ ಸ್ವಾಗತ ಕೋರಿ ಅಭಿನಂದಿಸಿದರು. ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕರವೇ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ದೀಪಕ್, ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಆನಂದ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!