ಕಾರ್ಯಕ್ರಮ

ಕೆರೆಕೇರಿ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಉದ್ಘಾಟನೆ

ಗುಣಮಟ್ಟದ ಹಾಲನ್ನು ಸಂಘಕ್ಕೆ ಹಾಕಲು ನಿರ್ದೇಶಕರ ಹೇಮಂತ್ ಕುಮಾರ್ ಮನವಿ

ಕುಶಾಲನಗರ, ಜು. 28: ಇಲ್ಲಿಗೆ ಸಮೀಪದ ಕೆರೆಕೇರಿ ಗ್ರಾಮದಲ್ಲಿ ನೂತನವಾಗಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಉದ್ಘಾಟನೆಯನ್ನು ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲೆ ನಿರ್ದೇಶಕ ಕೆ.ಕೆ.ಹೇಮಂತ್ ಕುಮಾರ್ ನವರು ನೆರವೇರಿಸಿದರು.
ನಂತರ ಮಾತಾನಾಡುತ್ತಾ ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ,ಅದೇ ರೀತಿಯಲ್ಲಿ ಸದಸ್ಯರು ತಮ್ಮ ಸಂಘಗಳಿಗೆ ಉತ್ತಮ ಗುಣಮಟ್ಟದ ಹಾಲನ್ನು ಹಾಕುವ ಮೂಲಕ ಸಂಘದ ಅಭಿವೃದ್ಧಿ ಸಹಕಾರಿಗಳಾಗಬೇಕು, ಒಕ್ಕೂಟದ ವತಿಯಿಂದ ಸಹಕಾರ ಸಂಘಗಳಿಗೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು, ಸಂಘದ ಪ್ರಗತಿಗೆ ಸದಸ್ಯರುಗಳು ಮುಖ್ಯ ಕಾರಣಿಭೂತರಾಗಿರುತ್ತಾರೆ. ಸಂಘದ ಬೆಳವಣಿಗೆಗೆ ಅನುಕೂಲವಾಗುವಂತೆ ಒಕ್ಕೂಟದ ಸಹಯೋಗದೊಂದಿಗೆ ನೂತನ ಕಟ್ಟಡ ನಿರ್ಮಾಣ ಬೇಕಾಗುವ ಸವಲತ್ತುಗಳನ್ನು ನೀಡಲಾಗುವುದು ಇದರ ಬಳಕೆಯ ಮೂಲಕ ಸಂಘದ ಅಭಿವೃದ್ಧಿ, ಮತ್ತು ಗ್ರಾಮದ ರೈತರ ಅರ್ಥಿಕ ಮಟ್ಟದ ಸುಧಾರಣೆ ಅನುಕೂಲಕಾರವಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಾಸನ ಡೈರಿ ಸಹಾಯಕ ನಿರ್ದೇಶಕ ಗಂಗಾಧರ ಮಾತಾನಾಡಿ ರೈತರ ಬದುಕಿಗೆ ಹೈನುಗಾರಿಕೆ ಮಹತ್ವಪೂರ್ಣವಾಗಿದೆ ,ಇದಕ್ಕೆ ಪೂರಕವಾಗಿ ಸಮೀಪ ದಲ್ಲೇ ಹಾಲು ಉತ್ಪಾದಕರ ಸಹಕಾರ ಸಂಘಗಳು ಇರುವುದರಿಂದ ಅವುಗಳ ಪ್ರಯೋಜನವನ್ನು ರೈತರು ಪಡೆದುಕೊಳ್ಳುವಂತೆ ತಿಳಿಸಿದರು.
ಹಾಲು ಉತ್ಪಾದಕರ ಸಂಘಗಳ ಕೊಡಗು ವಿಸ್ತಾಣಾಧಿಕಾರಿ ಬಿ.ವಿ. ವೀಣಾ ಮಾತಾನಾಡಿ ಹೈನುಗಾರಿಕೆ ಸಂಬಂಧಿಸಿದಂತೆ ಒಕ್ಕೂಟದ ವತಿಯಿಂದ ರೈತರಿಗೆ ಅನುಕೂಲವಾಗುವಂತೆ ಹಸುಗಳಿಗೆ ಚಿಕಿತ್ಸಾ ವ್ಯವಸ್ಥೆ, ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು ಅದರ ಸದುಪಯೋಗ ಪಡಿಸಿಕೊಳ್ಳಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಕೆರೆಕೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ರೇಖಾ ಪ್ರಸಾದ್, ಉಪಾಧ್ಯಕ್ಷೆ ಪ್ರೀತಿ ಪ್ರದೀಪ್, ಹಾಲು ಉತ್ಪಾದಕರ ಸಹಕಾರ ಸಂಘಗಳ ಹಿರಿಯ ವಿಸ್ತಾರಣಾಧಿಕಾರಿ ಎಸ್. ಪಿ. ಗಂಗಾಧರ್, ಕೂಡಿಗೆ ಡೈರಿ ವ್ಯವಸ್ಥಾಪಕ ನಂದಿಶ್, ಸಹಾಯಕ ವ್ಯವಸ್ಥಾಪಕ ಎಂ. ವೇಣುಗೋಪಾಲ, ಕೊಡಗು ಜಿಲ್ಲೆಯ ವಿಸ್ತಾರಣಾಧಿಕಾರಿ ಬಿ. ಬಿ.ವೀಣಾ, ಸಂಘದ ಕಾರ್ಯದರ್ಶಿ ಮಂಜಳಾ ಸೇರಿದಂತೆ ಸಂಘದ ನಿರ್ದೇಶಕರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!