ಕುಶಾಲನಗರ, ಮಾ 23: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಸುಂದರನಗರದ ಕೋರೆ ರಸ್ತೆಯ ಹಕ್ಕುಪತ್ರ ವಂಚಿತರ ಹೋರಾಟ ಸಮಿತಿ ಮನವಿ ಹಿನ್ನೆಲೆಯಲ್ಲಿ ಸರ್ವೆ ಕಾರ್ಯಕ್ಕೆ ಪರಿಶೀಲನೆ ನಡೆಯಿತು.
ತಹಸೀಲ್ದಾರ್ ಗೆ ಸಲ್ಲಿಸಿದ ಮನವಿ ಮೇರೆಗೆ ಸರ್ವೆ ಇಲಾಖೆಯಿಂದ ಸರ್ವೆಯರ್ ಸಿದ್ದರಾಜು ಎಂಬವರ ಸರ್ವೆ ಕಾರ್ಯಕ್ಕೆ ಆಗಮಿಸಿದ್ದರು. ಈ ಸಂದರ್ಭ ಸದರಿ ಪ್ರದೇಶ ಅರಣ್ಯ ಇಲಾಖೆಗೆ ಒಳಪಡುವ ಬಗ್ಗೆ ಗಮನಕ್ಕೆ ಬಂದಿದೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಎಲ್.ಎಂ.ನಾಗರಾಜು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಮ್ಮುಖದಲ್ಲಿ ಸರ್ವೆ ಕಾರ್ಯ ನಡೆಯುವ ಅಗತ್ಯವಿದೆ. ಸರ್ವೆ ಬಳಿಕ ನೀಡುವ ವರದಿ ಅನ್ವಯ ಅರಣ್ಯ ಎಂಬುದನ್ನು ಪೈಸಾರಿ ಎಂದು ಮಾರ್ಪಾಡುಗೊಳಿಸಿ ನಮ್ಮ ನಿವೇಶನಗಳಿಗೆ ಹಕ್ಕುಪತ್ರ ಒದಗಿಸಲು ಹೋರಾಟ ಮುಂದುವರೆಸಲಾಗುತ್ತದೆ. ಹಲವು ದಶಕಗಳದ ಇಲ್ಲಿ ನೆಲೆಸಿರುವ ನಮಗೆ ಹಕ್ಕುಪತ್ರ ದೊರೆಯುವ ವಿಶ್ವಾಸವಿದೆ ಎಂದು ನಾಗರಾಜ್ ತಿಳಿಸಿದರು.
ಈ ಸಂದರ್ಭ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸೌಮ್ಯ ನಾಗರಾಜು, ನಿವಾಸಿಗಳಾದ ವಿಜಯ್, ಮಂಜು ಕುಟ್ಟಿ, ಕವಿತಾ, ಸಂಧ್ಯಾ ಕಾವೇರಪ್ಪ, ಮಹದೇವಮ್ಮ, ಭಾರತಿ, ಕುಸುಮ, ದೀಪಿಕಾ, ಮುತ್ತು ಲಕ್ಷ್ಮಿ, ದೇವಿಕಾ, ಭವ್ಯ ಮತ್ತಿತರರು ಹಾಜರಿದ್ದರು.
Back to top button
error: Content is protected !!