ಕಾರ್ಯಕ್ರಮ

ತೊರೆನೂರು ಪ್ರಾಥಮಿಕ ಶಾಲೆಯಲ್ಲಿ ವಿವೇಕ ಕೊಠಡಿ ಉದ್ಘಾಟನೆ

ಕುಶಾಲನಗರ, ಜ 20: ತೊರೆನೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ವಿವೇಕ ಕೊಠಡಿಯ ಉದ್ಘಾಟನಾ ಕಾರ್ಯಕ್ರಮ ಮಂಗಳವಾರ ನಡೆಯಿತು.
ತಾಲೂಕು ಪಂಚಾಯಿತಿ ವತಿಯಿಂದ 27 ಲಕ್ಷ ಅನುದಾನದಲ್ಲಿ ನಿರ್ಮಾಣವಾದ ವಿವೇಕ ಕೊಠಡಿಯನ್ನು
ಮಾಜಿ ಶಾಸಕ ಎಂ ಪಿ ಅಪ್ಪಚ್ಚುರಂಜನ್ ಹಾಗೂ ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ವಿ.ಪಿ. ಶಶಿಧರ್ ಜಂಟಿಯಾಗಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅಪ್ಪಚ್ಚುರಂಜನ್, ಸರ್ಕಾರಿ ಶಾಲೆಗಳ ಉಳಿವಿಗಾಗಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸುವಂತೆ ಸಲಹೆ ನೀಡಿದರು,
ವಿ.ಪಿ.ಶಶಿಧರ್ ಮಾತನಾಡಿ ವಿದ್ಯಾದೇಗುಲ ರಾಜಕೀಯ ವೇದಿಕೆ ಆಗದಿರಲಿ ಎಂದು ಕಿವಿಮಾತು ಹೇಳಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಟಿ.ಸಿ. ಸಂತೋಷ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೃಷ್ಣಪ್ಪ, ತೊರೆನೂರು ಪಂಚಾಯಿತಿ ಉಪಾಧ್ಯಕ್ಷೆ ರೂಪ ಮಹೇಶ್,
ಸದಸ್ಯರಾದ ಸಾವಿತ್ರಿ ಗಿರೀಶ್, ಟಿ.ಸಿ.ಶಿವಕುಮಾರ, ಕೆ.ಬಿ.ದೇವರಾಜು, ತೊರೆನೂರು ಸಹಕಾರ ಬ್ಯಾಂಕ್ ಅಧ್ಯಕ್ಷ ಟಿ.ಬಿ.ಜಗದೀಶ್, ನಿರ್ದೇಶಕರಾದ ಹೆಚ್.ಬಿ.ಚಂದ್ರಪ್ಪ, ಕೆ.ಎಸ್.ಕೃಷ್ಣೇಗೌಡ, ರವಿಕುಮಾರ್, ಮೂರ್ತಿ,ನೀರು ಬಳಕೆದಾರ ಸಂಘದ ಅಧ್ಯಕ್ಷ ಟಿ.ಕೆ.ಪಾಂಡುರಂಗ, ಉಪಾಧ್ಯಕ್ಷ ರವಿಚಂದ್ರ,
ಪಂಚಾಯತಿ ಮಾಜಿ ಅಧ್ಯಕ್ಷ ಟಿ.ಕೆ.ವಸಂತ್, ಶಿಕ್ಷಕ ಅನಿಲ್ ರವರು ನಿರೂಪಿಸಿದರು, ಮುಖ್ಯ ಶಿಕ್ಷಕರಾದ ಜಿ.ಎನ್.ಭಾಗ್ಯಲಕ್ಷ್ಮಿ ರವರು ಸ್ವಾಗತಿಸಿದರು, ಶಿಕ್ಷಕ ಮಾಲತೇಶ್ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!