ಕುಶಾಲನಗರ, ಜ 20: ಕೂಡಿಗೆ ಎಸ್. ಕೆ.ಎಸ್. ಎಸ್. ಎಫ್. ನ ವತಿಯಿಂದ ಸಮಸ್ತ 100ನೇ ವಾರ್ಷಿಕ ಅಂತರಾಷ್ಟ್ರೀಯ ಮಹಾ ಸಮ್ಮೇಳನದ ಅಂಗವಾಗಿ ಕೂಡಿಗೆ ಶಕ್ತಿ ವೃದಾಶ್ರಮದ ವಯೋವೃದ್ಧರಿಗೆ ಮಧ್ಯಾಹ್ನ ಅನ್ನ ಸಂತರ್ಪಣ ಕಾರ್ಯಕ್ರಮ ನೆರವೇರಿಸಲಾಯಿತು.
ಕೂಡಿಗೆ ಘಟಕದ ಅಧ್ಯಕ್ಷ ಮಹಮ್ಮದ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಸ್ತ ಸಂಸ್ಥೆಯ ಉದ್ದೇಶ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ,ಸಮುದಾಯದ ಎಲ್ಲಾ ಭಾಂಧವರು ಒಳಗೊಂಡು ಸಮಾಜದಲ್ಲಿರುವ ಬಡ ಕುಟುಂಬದವರಿಗೆ ಸಹಕಾರ, ಆರೋಗ್ಯ ಚಿಕಿತ್ಸೆಗಾಗಿ ,ವಿದ್ಯಾರ್ಥಿಗಳಿಗೆ ವಿಧ್ಯಾದಾನಕ್ಕೆ ಅನುಕೂಲ ಕಲ್ಪಿಸುವ ಮೂಲಕ ವಿವಿಧ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೂಡಿಗೆ ಕೂಡುಮಂಗಳೂರು ಹನುಮ ಸೇನಾ ಸಮಿತಿ ಅಧ್ಯಕ್ಷ ಕೆ.ಎಸ್. ಶಿವಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಅನಂತ, ಕೂಡಿಗೆ ಮೋಹಿಂದಿನ್ ಮಸೀದಿ ಅಧ್ಯಕ್ಷ ಅಜೀಜ್, ಉದ್ಯಮಿ ಪ್ರದೀಪ್, ಸತೀಶ್, ಘಟಕದ ಕಾರ್ಯದರ್ಶಿ ರಫೀಕ್,ಖಜಾಂಚಿ ಶಾಫಿ, ಪ್ರಮುಖರಾದ ಅಬೂಬಕರ್, ಧಾರೀನಿ,ಖಾಲಂದರ್, ರಜಾಕ್, ವೃದ್ರಾಶ್ರಮದ ವ್ಯವಸ್ಥಾಪಕ ಚಂದ್ರ ಸೇರಿದಂತೆ ಹಲವಾರು ಮಂದಿ ಇದ್ದರು.
Back to top button
error: Content is protected !!