ಕ್ರೈಂ

ಮರದ ದಿಮ್ಮಿ ತುಂಬಿದ್ದ ಮೂರು ವಾಹನಗಳು ಪೊಲೀಸ್ ವಶ

ಸಿದ್ದಾಪುರ, ಜು 14: ಬಾರೀ ಸರಕು ವಾಹನಗಳ ಓಡಾಟಕ್ಕೆ ಜಿಲ್ಲೆಯಲ್ಲಿ ನಿಷೇಧ ಇರುವ ಹಿನ್ನೆಲೆಯಲ್ಲಿ ‌ಮರದ ದಿಮ್ಮಿಗಳ‌ನ್ನು ತುಂಬಿದ ಮೂರು ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಿದ್ದಾಪುರ ಸಮೀಪದ ಆನಂದಪುರ ಹಂಚಿಕಾಡು ಎಸ್ಟೇಟ್ ನಲ್ಲಿ ಕಾನೂನು ಬಾಹಿರವಾಗಿ ಮರದ ದಿಮ್ಮಿಗಳನ್ನು ಸಾಗಿಸಲು ಯತ್ನಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಮಾಲು ಸಹಿತ ಮೂರು ವಾಹನಗಳನ್ನು ವಶಪಡಿಸಿ ಪ್ರಕರಣ ದಾಖಲಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!