ಕಾರ್ಯಕ್ರಮ

ಐಶ್ವರ್ಯ ಪಬ್ಲಿಕ್ ಸ್ಕೂಲ್ ಮತ್ತು ಪದವಿಪೂರ್ವ ಕಾಲೇಜಿನ ನ ವಾರ್ಷಿಕೋತ್ಸವ

ಕುಶಾಲನಗರ, ಡಿ 26: ಬೊಳ್ಳೂರಿನ‌ ಐಶ್ವರ್ಯ ಪಬ್ಲಿಕ್ ಸ್ಕೂಲ್ ಮತ್ತು ಪದವಿಪೂರ್ವ ಕಾಲೇಜಿನ ನ ವಾರ್ಷಿಕೋತ್ಸವ ನೃತ್ಯಕಲಾಂಜಲಿ ಕಾರ್ಯಕ್ರಮ ಶಾಲಾ ಆವರಣದಲ್ಲಿ ನಡೆಯಿತು.

ವಿರಾಜಪೇಟೆ ಸರಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಜ್ಯೋತಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಬಾಲ್ಯದಿಂದಲೇ ತಾಯಿ ತನ್ನ ಮಗುವಿಗೆ ಉತ್ತಮ ವಿಚಾರಗಳನ್ನು ಬಿತ್ತಬೇಕಿದೆ. ಮಕ್ಕಳನ್ನು ಸುಸಂಸ್ಕೃತರಾಗಿಸುವಲ್ಲಿ ಪೋಷಕರ ಪಾತ್ರ ಪ್ರಮುಖವಾಗಿದೆ. ನಮ್ಮ ನಡವಳಿಕೆಯನ್ನು ಮಕ್ಕಳು ಅನುಕರಣೆ ಮಾಡುತ್ತಾರೆ. ಹೀಗಾಗಿ ಅವರ ಮುಂದೆ ಸತ್ಕಾರ್ಯಗಳನ್ನು ಮಾಡಿ. ಚಿಕ್ಕ ಮಕ್ಕಳಿಗೆ ಮೊಬೈಲ್, ಟಿವಿ ಬಳಕೆ ಕಡಿಮೆ ಮಾಡಿ.
ಶಾಲೆಗೆ ಸೇರಿಸಿದ‌ ಮಾತ್ರಕ್ಕೆ ತಮ್ಮ ಜವಬ್ದಾರಿ ಮುಕ್ತಾಯವಾಗುವುದಿಲ್ಲ. ಶಿಕ್ಷಕರು ಅವರ ಪಾಲಿನ ಕರ್ತವ್ಯ‌ ನಿರ್ವಹಣೆ ಮಾಡುತ್ತಾರೆ. ತಮ್ಮ‌ ಮಕ್ಕಳು ಪದವಿ ಪಡೆದುಕೊಳ್ಳುವವರೆಗೆ ಪೋಷಕರು ಅವರ ಶೈಕ್ಷಣಿಕ ಜೀವನದ‌ ಬಗ್ಗೆ ಸದಾ ನಿಗಾವಹಿಸಬೇಕಿದೆ ಎಂದರು. ಶಿಕ್ಷಕರು ಮಕ್ಕಳ‌ ನಡುವೆ ಬೇಧಬಾವ ತೋರದೆ ಎಲ್ಲರನ್ನು‌ ಒಂದೇ ರೀತಿಯಲ್ಲಿ ಕಾಣಬೇಕಿದೆ ಎಂದು ಕಿವಿಮಾತು ಹೇಳಿದರು.

ಕೂಡಿಗೆ ಸರಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಹಂಡ್ರಂಗಿ‌ ನಾಗರಾಜ್ ಮಾತನಾಡಿ, ಪೋಷಕರು ಮಕ್ಕಳ ಪರೀಕ್ಷಾ ಸಮಯಗಳಲ್ಲಿ ಮೊಬೈಲ್, ಟಿವಿ ಬಳಕೆಗೆ ಸ್ವಯಂ‌ ನಿರ್ಬಂಧಗಳನ್ನು ವಿಧಿಸುವ‌ ಮೂಲಕ ಮಕ್ಕಳ ಕಲಿಕೆಯನ್ನು ಉತ್ತೇಜಿಸಬೇಕಿದೆ. ತಾತ್ಕಾಲಿಕ ಸಂಭ್ರಮಗಳ ಬದಲಿಗೆ ಶೈಕ್ಷಣಿಕವಾಗಿ ಉತ್ತಮ ಫಲಿತಾಂಶ ಪಡೆದುಕೊಳ್ಳುವ ನಿಟ್ಟಿನಲ್ಲಿ ಅವರನ್ನು ತಯಾರುಗೊಳಿಸಬೇಕಿದೆ ಎಂದರು.

ಸಂಸ್ಥೆ ಸ್ಥಾಪಕ ಅಧ್ಯಕ್ಷ ಪುಲಿಯಂಡ ರಾಮ್ ದೇವಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥೆ ಪ್ರಾಂಶುಪಾಲ ಜೋಯಪ್ಪ ವಾರ್ಷಿಕ ಶೈಕ್ಷಣಿಕ ವರದಿ ವಾಚಿಸಿದರು.

ಸಂಸ್ಥೆಯ ಉಪ ಪ್ರಾಂಶುಪಾಲ‌ ಮದನ್, ಪ್ರಮುಖರಾದ ಸುಬ್ಬಯ್ಯ, ಕಾವೇರಿ ಸೇರಿದಂತೆ ಉಪನ್ಯಾಸಕ ವೃಂದ, ಪೋಷಕರು, ವಿದ್ಯಾರ್ಥಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!