ಆರೋಪ

ಅಂಗಡಿ ಮಾಲಕಿಗೆ‌ ವಂಚಿಸಿದವನ ಗುರುತು ಪತ್ತೆಗೆ ಮನವಿ

ಕುಶಾಲನಗರ, ಡಿ 21: ಕುಶಾಲನಗರದ ಎನ್.ಟಿ.ಸಿ.ವ್ಯಾಪಾರ ಕೇಂದ್ರಕ್ಕೆ ಗ್ರಾಹಕನ ಸೋಗಿನಲ್ಲಿ ಬಂದ ವಂಚಕ ಮಳಿಗೆ‌ಯೊಂದರ ಮಾಲಕಿಗೆ ಗೊಂದಲ ಮೂಡಿಸಿ ಹಣ ವಂಚಿಸಿ ತೆರಳಿದ ಘಟನೆ ನಡೆದಿದೆ.

100 ರೂಗಳ ಆಟಿಕೆ ಖರೀದಿ ನೆಪದಲ್ಲಿ 500 ರೂ ನೀಡಿ ವಾಪಾಸ್ ಎರಡು ಬಾರಿ 500 ರೂಗಳನ್ನು ಪಡೆದು ಕೀಸೆಗಿರಿಸಿದಲ್ಲದೆ 3ನೇ ಬಾರಿಗೆ ಆಟಿಕೆ ಖರೀದಿಸಿ 500 ರೂ‌ ನೀಡಿದ್ದೇನೆ ಎಂದು ಚೆಲ್ಲರೆಯಾಗಿ 400 ರೂಗಳನ್ನು ಪೀಕಿ ಕಾಲ್ಕಿತ್ತಿದ್ದಾನೆ. ತನ್ನದೇ ವೈಯಕ್ತಿಕ ಚಿಂತನೆಯಲ್ಲಿದ್ದ ಮಾಲಕಿ ಪುಷ್ಪ ಅವರಿಗೆ 1400 ರೂ ಯಾಮಾರಿಸಿರುವ ಬಗ್ಗೆ ಎಚ್ಚೆತ್ತುಗೊಂಡ ಸಿಸಿ ಕ್ಯಾಮೆರ ಪರಿಶೀಲಿಸಿದಾಗ ಮೋಸ ಹೋಗಿರುವುದು ಪತ್ತೆಯಾಗಿದೆ. ಈ ವಂಚನ‌ ಬಗ್ಗೆ ವ್ಯಾಪಾರಿಗಳು ಎಚ್ಚರವಹಿಸಬೇಕೆಂದು ಅವರು ಸೂಚಿಸಿದ್ದು ಗುರುತು ಪತ್ತೆಯಾದಲ್ಲಿ ಈ ಸಂಖ್ಯೆಗೆ 95917 97854 ಮಾಹಿತಿ ನೀಡಲು ಕೋರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!