ಧಾರ್ಮಿಕ

ಮಕರ ಜ್ಯೋತಿ ದರ್ಶನ ಮಾಡಲು ಪಾದಯಾತ್ರೆ

ಕುಶಾಲನಗರ, ಡಿ 19: ಶಭರಿಮಲೆಯಲ್ಲಿ ದಿನಾಂಕ 14.1.2026 ರಂದು ನಡೆಯುವ ಸಾಕ್ಷಾತ್ ಮಣಿಕಂಠನ ರೂಪವೆಂದು ನಂಬಿರುವ ಅಯ್ಯಪ್ಪ ಭಕ್ತರು ವೀಕ್ಷಿಸುವ ಮಕರ ಜ್ಯೋತಿ ದರ್ಶನ ಮತ್ತು ದೇವರ ದರ್ಶನ ಮಾಡಲು ಕುಶಾಲನಗರದಿಂದ ಎರಡನೇ ತಂಡ ಪಾದಯಾತ್ರೆ ಆರಂಭಿಸಿದೆ. ತಂಡದಲ್ಲಿ ಕುಶಾಲನಗರದ ಯತಿರಾಜ್, ಕಿರಣ್, ಹರೀಶ್ ಸ್ವಾಮಿಗಳು ದಿನಾಂಕ 18.12.2025 ರಂದು ಪ್ರಯಾಣ ಬೆಳೆಸಿದರು. ಈ ಮೊದಲು ಯಾತ್ರೆ ಆರಂಭಿಸಿದ ರಮೇಶ್ ಅವರ ತಂಡ ಗುರುವಾಯುರ್ ಗೆ ಇನ್ನೂ 60 ಕಿ.ಮೀ ಇರುವ ಅಂತರಕ್ಕೆ ತಲುಪಿದ್ದಾರೆ. ಪಾದಯಾತ್ರೆ ಸಂಧರ್ಭ ಧರ್ಮದ ಬೇಧವಿಲ್ಲದೆ ಕೇರಳದಲ್ಲಿ ನಮಗೆ ಉಳಿದು ಕೊಳ್ಳಲು ಮತ್ತು ಎಲ್ಲಾ ಸೌಲಭ್ಯ ಮಾಡುತ್ತಿರುವುದಾಗಿ ರಮೇಶ್ ಗುರುಸ್ವಾಮಿಗಳು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!