ಕುಶಾಲನಗರ, ಡಿ 04: ಹುತ್ತರಿ ಹುಣ್ಣಿಮೆ ಅಂಗವಾಗಿ ಬಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ಕಾವೇರಿ ಸೇತುವೆ ಬಳಿಯ ಕಾವೇರಿ ಮಾತೆ ಪ್ರತಿಮೆಗೆ 153ನೇ ಆರತಿ ಪೂಜೆ ನೆರವೇರಿಸಲಾಯಿತು.
ವಾಡಿಕೆಯಂತೆ ಮಾತೆಯ ಪ್ರತಿಮೆ ಶುದ್ದೀಕರಿಸಿ ವಸ್ತ್ರ ಉಡಿಸಿ ಹೂಮಾಲೆಗಳಿಂದ ಅಲಂಕರಿಸಿ ಮಹಾಮಂಗಳಾರತಿ ಬೆಳಗಿ ಪ್ರಸಾದ ವಿನಿಯೋಗ ಮಾಡಲಾಯಿತು.
ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಅರ್ಚಕ ಪುರುಷೋತ್ತಮಭಟ್ ಪೂಜಾ ವಿಧಿ ನೆರವೇರಿಸಿದರು.
ಬಾರವಿ ಕಾವೇರಿ ಕನ್ನಡ ಸಂಘದ ಬಬೀಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್, ರುದ್ರ, ಇ.ಟಿ.ಚಂದ್ರು, ಪಿರಿಯಾಪಟ್ಟಣ ಪುರಸಭೆ ಸದಸ್ಯ ಪಿ.ಎನ್. ವಿನೋದ್, ವಿನು ಅಯ್ಯಪ್ಪ ಮತ್ತಿತರರು ಇದ್ದರು.
Back to top button
error: Content is protected !!