ಅಪಘಾತ
ಹನುಮ ಜಯಂತಿ: ಬೆಂಕಿಗಾಹುತಿಯಾದ ಮಂಟಪ


ಕುಶಾಲನಗರ, ಡಿ 03: (ಕುಶಲವಾಣಿ) ಕುಶಾಲನಗರದಲ್ಲಿ ನಡೆದ ಹನುಮ ಜಯಂತಿ ಅಂಗವಾಗಿ ಮಂಟಪಗಳ ಶೋಭಾಯಾತ್ರೆ ಸಂದರ್ಭ ಕೂಡಿಗೆ-ಕೂಡುಮಂಗಳೂರಿನ ಹನುಮ ಸೇನಾ ಸೇವಾ ಸಮಿತಿ ಮಂಟಪಕ್ಕೆ ಪ್ರದರ್ಶನ ಬಳಿಕ ಬೆಂಕಿ ಹೊತ್ತಿಕೊಂಡ ಘಟನೆ ಮುಂಜಾನೆ 3 ಗಂಟೆಗೆ ನಡೆದಿದೆ. ಪಟಾಕಿ ಸಿಡಿಸಿದ ವೇಳೆ ಮೂರ್ತಿಯೊಂದರ ಕೈಯೊಳಗೆ ಹೊಕ್ಕಿದ ಪಟಾಕಿಯಿಂದ ಬೆಂಕಿ ಹೊತ್ತಿಕೊಂಡಿದೆ. ಕೂಡಲೆ ಕಾರ್ಯೊಪ್ರವೃತ್ತರಾದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.