ಕುಶಾಲನಗರ, ಸೆ 01 : ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ವತಿಯಿಂದ ಇದೇ ಪ್ರಥಮ ಬಾರಿಗೆ ಸೆ.6 ರಂದು ಶನಿವಾರ ಇಲ್ಲಿನ ಎಸ್ಎಲ್ಎನ್ ಟೈಮ್ ಸ್ಕ್ವೇರ್ ಆವರಣದಲ್ಲಿ ಬೃಹತ್ ಗ್ರಾಹಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ ಎಂದು ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಕೆ.ಎಸ್.ನಾಗೇಶ್ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ನಡೆಯುತ್ತಿರುವ ಬೃಹತ್ ಮೇಳದಲ್ಲಿ ವಿವಿಧ ಕಾರು ಹಾಗೂ ಬೈಕ್ ಕಂಪನಿಗಳು ಭಾಗವಹಿಲಿವೆ.ಜೊತೆಗೆ ಹೋಂ ಅಪ್ಲೈಯನ್ಸ್ ಸೇರಿದಂತೆ ಸುಮಾರು 70ಕ್ಕೂ ಅಧಿಕ ವಿವಿಧ ಸ್ಟಾಲ್ ಗಳು ಇರಲಿವೆ.ಈ
ಒಂದು ದಿನ ಮೇಳ ಕುಶಾಲನಗರ ಮಾರುಕಟ್ಟೆ ಶಕ್ತಿ ಪ್ರದರ್ಶನವಾಗಲಿದೆ.ಜೊತೆಗೆ ಇದು ಯಶಸ್ವಿಯಾದ್ರೆ ಕುಶಾಲನಗರದ ಆರ್ಥಿಕ ಶಕ್ತಿ ವೃದ್ಧಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಂದು ಬೆಳಿಗ್ಗೆ 10 ಗಂಟೆಗೆ ಅದ್ವೈತ್ ಹುಂಡೈ ಕಂಪನಿಯ ವ್ಯಾಪಾರ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ ಎಲ್.ಎನ್.ಅಜಯ್ ಸಿಂಗ್ ಮೇಳವನ್ನು ಉದ್ಘಾಟಿಸಲಿದ್ದಾರೆ.ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಶಾಸಕ ಎ.ಎಸ್.ಪೊನ್ನಣ್ಣ,ಶಾಸಕ ಡಾ.ಮಂತರ್ ಗೌಡ,ಎಸ್.ಎಲ್.ಎನ್.ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥನ್, ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು, ಮಡಿಕೇರಿ ಲೀಡ್ ಬ್ಯಾಂಕ್ ಮೇನೇಜರ್ ಗಂಗಾಧರ್ ನಾಯಕ್, ಕೊಡಗು ಸಿಒಸಿ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಕುಶಾಲನಗರ ವರ್ತಕರು ಅರ್ಧ ದಿನ ಅಂಗಡಿ ಮುಂಗಟ್ಟು ಅನ್ನು ಬಂದ್ ಮಾಡಿ ಮೇಳದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ವಿವಿಧ ಕಾರು ಕಂಪನಿಗಳು ತಮ್ಮ ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದ್ದಾರೆ.ಜಿಲ್ಲೆಯ ವಿವಿಧ ಬ್ಯಾಂಕ್ ಗಳು ಭಾಗವಹಿಸಲಿವೆ.ಜೊತೆಗೆ ಮೈಸೂರು ನಾರಾಯಣ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಕೂಡ ನಡೆಯಲಿದೆ.ಒಂದೇ ವೇದಿಕೆಯಲ್ಲಿ ರಿಯಾಯಿತಿ ದರದಲ್ಲಿ ಅಗತ್ಯ ವಸ್ತುಗಳ ಮಾರಾಟ ಕೂಡ ನಡೆಯಲಿದೆ.ಆದ್ದರಿಂದ ಎಲ್ಲಾ ಸಾರ್ವಜನಿಕರು,ಗ್ರಾಹಕರು ಹಾಗೂ ವರ್ತಕರು ಈ ಮೇಳದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನಾಗೇಶ್ ಮನವಿ ಮಾಡಿದರು.
ಗೋಷ್ಠಿಯಲ್ಲಿ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಕಾರ್ಯದರ್ಶಿ ಚಿತ್ರರಮೇಶ್,ಖಜಾಂಚಿ ಎನ್.ವಿ.ಬಾಬು,ಉಪಾಧ್ಯಕ್ಷ ಎಂ.ಡಿ.ರಂಗಸ್ವಾಮಿ,
ನಿರ್ದೇಶಕರಾದ ಪೊನ್ನಚ್ಚನ ಮೋಹನ್, ಎಂ.ಕೆ.ದಿನೇಶ್ ಅಬ್ದುಲ್ ರಷೀದ್ ಭಾಗವಹಿಸಿದ್ದರು.
Back to top button
error: Content is protected !!