ಪ್ರಕಟಣೆ

ಮನೆ ಕಾಮಗಾರಿ ಪೂರ್ಣಗೊಳಿಸಲು ಜುಲೈ-2026 ಅಂತಿಮ ಗಡುವು

ಕುಶಾಲನಗರ ಏ.02:-ರಾಜೀವ್ ಗಾಂಧಿ ವಸತಿ ನಿಗಮದ ಸೂಚನೆಯಂತೆ ಪ್ರಧಾನ ಮಂತ್ರಿ ಆವಾಸ್ ನಗರ ಯೋಜನೆ 1.0 ಅಡಿ 2025 ರ ಡಿಸೆಂಬರ್ 31 ಕ್ಕೆ ಮುಕ್ತಾಯಗೊಂಡಿರುವುದರಿಂದ ಈ ಯೋಜನೆಯಡಿ ಜಿಲ್ಲೆಯ ಮಡಿಕೇರಿ ನಗರಸಭೆ, ಕುಶಾಲನಗರ ಮತ್ತು ವಿರಾಜಪೇಟೆ ಪುರಸಭೆ ಹಾಗೂ ಸೋಮವಾರಪೇಟೆ ಪಟ್ಟಣ ಪಂಚಾಯಿತಿಗಳಲ್ಲಿ ಫಲಾನುಭವಿಗಳು ಆಯ್ಕೆಯಾಗಿ ವಿವಿಧ ಹಂತಗಳಲ್ಲಿ ಮನೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುತ್ತವೆ. ಅಂತಹ ಫಲಾನುಭವಿಗಳು ಜುಲೈ-2026 ರ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಿ ಸಹಾಯಧನ ಪಡೆಯಲು ತಿಳಿಸಿದೆ. ಇಲ್ಲವಾದಲ್ಲಿ ಸಹಾಯಧನ ಬಿಡುಗಡೆಯಾಗುವುದಿಲ್ಲ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಬಸಪ್ಪ ಅವರು ಕೋರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!