ಕುಶಾಲನಗರ, ನ 15: (ಕುಶಲವಾಣಿ)ರಾಷ್ಟ್ರೀಯ ಹೆದ್ದಾರಿಯ ಕುಶಾಲನಗರ-ಮಡಿಕೇರಿ ಮಾರ್ಗದಲ್ಲಿ ಗಂಧದಕೋಟಿ ಬಳಿಯಿಂದ ನಿಸರ್ಗ ಧಾಮದವರೆಗೆ ಪಾದಚಾರಿ ಮಾರ್ಗ ಇಲ್ಲದೆ ಕಾಲ್ನಡಿಗೆಯಲ್ಲಿ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ, ಕೆಲಸಕ್ಕೆ ತೆರಳುವ ಪಾದಾಚಾರಿಗಳಿಗೆ ಅನಾನುಕೂಲ ಎದುರಾಗಿದೆ. ಜನನಿಬಿಡ, ವಾಹನ ದಟ್ಟಣೆಯ ಅಪಾಯಕಾರಿ ಮಾರ್ಗದಲ್ಲಿ ನಡೆದು ತೆರಳುವ ಮಂದಿ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಿದೆ. ಈ ನಡುವೆ ಹೆದ್ದಾರಿ ಬದಿಯಲ್ಲಿ ಟೂರಿಸ್ಟ್ ಬಸ್ ಗಳು ಸೇರಿದಂತೆ ಘನ ವಾಹನಗಳು ಅಡ್ಡಾದಿಡ್ಡಿ ನಿಲುಗಡೆಗೊಳ್ಳುತ್ತಿದ್ದು ಮತ್ತಷ್ಟು ಸಮಸ್ಯೆ ಎದುರಾಗಿದೆ. ಇದರಿಂದ ವಾಹನ ದಟ್ಟಣೆ ಕೂಡ ಅಧಿಕವಾಗುತ್ತಿದ್ದು ಈ ಬಗ್ಗೆ ಹೆದ್ದಾರಿ ಪ್ರಾಧಿಕಾರ, ಸಂಚಾರಿ ಪೊಲೀಸರು, ಗ್ರಾಪಂ ಆಡಳಿತ ಗಮನ ಹರಿಸಿ ಪಾದಾಚಾರಿಗಳಿಗೆ ಅನುಕೂಲ ಮಾಡಿಕೊಡಬೇಕಿದೆ ಎಂದು ವಿದ್ಯಾರ್ಥಿಗಳ ಪರವಾಗಿ ಟಿ.ಎ.ನಾರಾಯಣ ಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಆನಂದ್ ಆಗ್ರಹಿಸಿದ್ದಾರೆ.
Back to top button
error: Content is protected !!