ಕುಶಾಲನಗರ, ನ 04:ಜೆಸಿಐ ವಲಯ 14ರ ವಾರ್ಷಿಕ ಸಮ್ಮೇಳನ “ವಿಜಯಪರ್ವ – 2025” ಚಿಕ್ಕಮಗಳೂರಿನ ಹೋಟೆಲ್ ಸಿ.ಎನ್. ವಿಂಡ್ಸರ್ನಲ್ಲಿ, ಜೇಸಿಐ ಚಿಕ್ಕಮಂಗಳೂರು ಮಲ್ನಾಡ್ ಘಟಕದ ಆತಿಥ್ಯದಲ್ಲಿ ಭವ್ಯವಾಗಿ ಜರುಗಿತು.
ಈ ಸಮ್ಮೇಳನದಲ್ಲಿ ಜೇಸಿಐ ಕುಶಾಲನಗರ ಕಾವೇರಿ ಘಟಕವು ತನ್ನ ವಾರ್ಷಿಕ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿ, ಜೆಸಿಐಯ ಉದ್ದೇಶಗಳನ್ನು ಪರಿಣಾಮಕಾರಿಯಾಗಿ ಈಡೇರಿಸಿರುವ ಹಿನ್ನೆಲೆ “ಔಟ್ಸ್ಟ್ಯಾಂಡಿಂಗ್ ಲಾಮ್” ಮತ್ತು “ಔಟ್ಸ್ಟ್ಯಾಂಡಿಂಗ್ ಪ್ರೆಸಿಡೆಂಟ್” ಎಂಬ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗಳಿಸುವ ಮೂಲಕ ಕೀರ್ತಿಯನ್ನು ಗಳಿಸಿದೆ.
ಘಟಕದ ಅಧ್ಯಕ್ಷರಾದ ಜೇಸಿ ತೇಜ ದಿನೇಶ್ ತಮ್ಮ ಸಮರ್ಪಿತ ತಂಡದೊಂದಿಗೆ ಈ ಗೌರವವನ್ನು ಸ್ವೀಕರಿಸಿದರು. ಪ್ರಶಸ್ತಿಗಳನ್ನು ವಲಯ 14ರ ಅಧ್ಯಕ್ಷರಾದ ಜೇಸಿ ವಿಜಯಕುಮಾರ್ ಅವರು ಘಟಕದ ಪರವಾಗಿ ಜೇಸಿ ತೇಜ ದಿನೇಶ್ ಅವರಿಗೆ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ವಲಯ ಉಪಾಧ್ಯಕ್ಷ ಜೇಸಿ ಜಗದೀಶ್ ಬಿ, ವಲಯ ಮೀಡಿಯಾ ಸಂಯೋಜಕ ಜೇಸಿ ರಜನಿಕಾಂತ್ ಎಂ ಜೆ, ಪೂರ್ವ ಅಧ್ಯಕ್ಷರು ಜೇಸಿ ಪ್ರಶಾಂತ್, ಜೇಸಿ ಪ್ರವೀಣ್, ಶನಿವಾರಸಂತೆ ಅಧ್ಯಕ್ಷ ಜೇಸಿ ರವಿ, ಜೇಸಿ ಶ್ರೀನಿವಾಸ್, ಜೇಸಿ ಕಾವ್ಯ, ಜೇಸಿ ಕೋಮಲ ಹಾಗೂ ಅನೇಕ ಜೆಸಿಐ ನಾಯಕರು ಉಪಸ್ಥಿತರಿದ್ದರು.
ಅಧ್ಯಕ್ಷ ಜೇಸಿ ತೇಜ ದಿನೇಶ್ ಅವರು ಮಾತನಾಡಿ ಹೇಳಿದರು:
“ಈ ದ್ವಿಪ್ರಶಸ್ತಿ ನಮ್ಮ ಘಟಕದ ತಂಡದ ಬದ್ಧತೆ, ಶ್ರಮ ಮತ್ತು ಸೇವಾ ಚಟುವಟಿಕೆಗಳಿಗೆ ದೊರೆತ ಗೌರವವಾಗಿದೆ. ಇದು ಮುಂದಿನ ಬೆಳವಣಿಗೆಗೆ ಪ್ರೇರಣೆ ನೀಡುವುದರ ಜೊತೆಗೆ, ಯುವ ತಲೆಮಾರಿಗೆ ಹೊಸ ಉತ್ಸಾಹ ತುಂಬಲಿದೆ. 25ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಘಳಿಗೆಯಲ್ಲಿ ಈ ಗೌರವವು ನಮ್ಮ ಘಟಕದ ಹೆಮ್ಮೆಯ ಕ್ಷಣವಾಗಿದೆ.”
ಮೀಡಿಯಾ ಸಂಯೋಜಕ:
ಜೇಸಿ ರಜನಿಕಾಂತ್ ಎಂ ಜೆ
ವಲಯ ಮೀಡಿಯಾ ಕೋ-ಆರ್ಡಿನೇಟರ್, ಜೇಸಿಐ ವಲಯ 14
Back to top button
error: Content is protected !!