ಸಭೆ

ಕುಶಾಲನಗರದ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಕುಶಾಲನಗರ:, ಆ 18:ಕುಶಾಲನಗರದ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಭಾನುವಾರ ಕುಶಾಲನಗರ ಬೈಪಾಸ್ ರಸ್ತೆಯ ವಾಸವಿ‌ ಮಹಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ಕಿರಿಕೊಡ್ಲಿ‌ ಮಠದ ಶ್ರೀ ಸದಾಶಿವ ಸ್ವಾಮೀಜಿ ಅವರು ಸಭೆಯನ್ನು ಉದ್ಘಾಟಿಸಿದರು. ಶ್ರೀ‌ ಬಸವಣ್ಣ ಮತ್ತು
ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ‌ಮಾಡಿ‌ ನಮಿಸಲಾಯಿತು.

ಸಂಘದ ಅಧ್ಯಕ್ಷ ಟಿ.ಎಸ್.ಶಾಂಭಶಿವಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘ ಸ್ಥಾಪಿಸಬೇಕೆಂಬ ಬಹುದಿನಗಳ ಕನಸಿನಂತೆ
ಸಂಘವು 2024 ಫೆಬ್ರವರಿ ತಿಂಗಳಲ್ಲಿ ಕಾರ್ಯಾರಂಭ ಮಾಡಿತು. ಪ್ರಾರಂಭಿಕವಾಗಿ 446 ಮಂದಿ‌ ಷೇರುದಾರರಿಂದ 12 ಲಕ್ಷದ 13 ಸಾವಿರದ 100 ರೂಗಳನ್ನು ಸಂಗ್ರಹಿಸಿದೆ. ಸಂಘದ ನಿರ್ದೇಶಕರ ಎಫ್ ಡಿ. ಹಣದಿಂದ ಸಂಘದ ಕಛೇರಿ ಸ್ಥಾಪಿಸಲಾಯಿತು. ಷೇರುದಾರರ ಸಕಾಲದ ಸಹಕಾರದಿಂದ ಸಂಘ ಸ್ಥಾಪನೆಗೆ ಸಾಧ್ಯವಾಯಿತು ಎಂದು ಅವರು ಧನ್ಯವಾದ ಸಲ್ಲಿಸಿದರು.
ಡಿಜಟಲೀಕರಣ, ಆನ್ ಲೈನ್ ವ್ಯವಸ್ಥೆ ಕೂಡ ಅಳವಡಿಸಿಕೊಳ್ಳಲಾಗಿದೆ. ಸಂಘಕ್ಕೆ ಹೊರೆಯಾಗದಂತೆ ಪ್ರತಿ ಸಾಲಕ್ಕೂ ವಿಮೆ ಮಾಡಲಾಗಿದೆ.
ಪ್ರಸಕ್ತ 866 ಷೇರುದಾರರಿದ್ದ ಮುಂದಿನ ದಿನಗಳಲ್ಲಿ ಸಮಾಜ ಬಾಂಧವರು ಹೆಚ್ಚು ಷೇರು ಪಡೆದುಕೊಳ್ಳುವುದರೊಂದಿಗೆ ವ್ಯವಹಾರ ನಡೆಸುವ ಮೂಲಕ ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಅವರು ವಿನಂತಿಸಿದರು. ಮುಂದಿನ ದಿನಗಳಲ್ಲಿ ಬ್ರಾಂಚ್ ಸ್ಥಾಪನೆಗೆ‌ ಕೂಡ‌ ಚಿಂತನೆ ಹರಿಸಲಾಗಿದೆ ಎಂದರು.

ಸಂಘವನ್ನು ‌ಕೊಡಗು ಜಿಲ್ಲಾಮಟ್ಟದ‌ ಸಂಘವಾಗಿಸಬೇಕೆಂದು‌ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು.

ಮೃತಪಟ್ಟ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು. ವಾರ್ಷಿಕ ಮಹಾಸಭೆಯ ಆಹ್ವಾನ ‌ಪತ್ರಿಕೆಯನ್ನು ದಾಖಲು‌ ಮಾಡಿ, ಹಿಂದಿನ ವಾರ್ಷಿಕ ‌ಮಹಾಸಭೆಯ ನಡಾವಳಿ ಅಂಗೀಕರಿಸಲಾಯಿತು. 2023-24ನೇ ಸಾಲಿನ ಆಡಳಿತ ಮಂಡಳಿ ವರದಿ ಪರಿಶೀಲಿಸಿ, 2023-24ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಪರಿಶೀಲಿಸಿ ಅಂಗೀಕರಿಸಲಾಯಿತು. 2024-25 ನೇ ಸಾಲಿಗೆ ಅಂದಾಜು ಮುಂಗಡ ಪತ್ರ ಅನುಮೋದನೆ ಪಡೆಯಲಾಯಿತು. ಸಂಘದ ಬೈಲಾ ತಿದ್ದುಪಡಿ ಬಗ್ಗೆ ಪರಿಶೀಲಿಸಿ ಅಂಗೀಕರಿಸಲಾಯಿತು.

ಸಂಘದ ಉಪಾಧ್ಯಕ್ಷ ಹೆಚ್.ಪಿ.ಉದಯಕುಮಾರ್,
ನಿರ್ದೇಶಕರಾದ ಹೆಚ್.ವಿ.ಶಿವಪ್ಪ, ಯು.ಎಂ.ಬಸವರಾಜು, ಹೆಚ್.ಎಸ್.ಪುಟ್ಟರಾಜು, ಎಸ್.ಎಸ್.ಸುರೇಶ್, ಮೋಕ್ಷಿಕ್ ರಾಜ್ ಹೊನ್ನಗುಡಿ, ಬಿ.ಎನ್.ಶುಭಶೇಖರ್, ಕೆ.ಡಿ.ಪ್ರಶಾಂತ್, ಜಿ
ಎಸ್.ಯಶೋಧ, ಎ.ಆರ್.ಮಮತಾ
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಬಸವಣ್ಣಯ್ಯ‌ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!