ಕುಶಾಲನಗರ ಜು 11: ಕುಶಾಲನಗರ ವಲಯ ಅರಣ್ಯ ಇಲಾಖೆಯ ವ್ಯಾಪ್ತಿಯ ಅಂದಗೋವೆ, ನಾಕೂರು ಶಿರಂಗಾಲ, ಕಾನ್ ಬೈಲ್, ಬೈಚನಹಳ್ಳಿ,ಹೆರೂರು ಕಲ್ಲೂರು ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿರುವುದರ ಬಗ್ಗೆ ಗ್ರಾಮಸ್ಥರ, ಸಾರ್ವಜನಿಕರ ಮಾಹಿತಿ ಯ ಮೇರೆಗೆ ಈ ವ್ಯಾಪ್ತಿಯ ಗ್ರಾಮದ ತೋಟಗಳಲ್ಲಿ ಕಾಡಾನೆಗಳ ಬಿಡುಬಿಟ್ಟಿವೆ ಎಂದು ದೂರಿನ ಮೇರೆಗೆ ಜು 13 ರಂದು ಭಾನುವಾರ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಚರಣೆ ನಡೆಯಲಿದೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್ ಕುಮಾರ್ ಪತ್ರಿಕಾ ಪ್ರಕಟಣೆಯ ಲ್ಲಿ ತಿಳಿಸಿದ್ದಾರೆ.
ಕಾರ್ಯಚರಣೆ ಸಂದರ್ಭದಲ್ಲಿ ಆಯಾ ಗ್ರಾಮದ ತೋಟದ ಮಾಲೀಕರು ತೋಟದ ಕಾರ್ಮಿಕರಿಗೆ ಸೂಚನೆ ನೀಡುವಂತೆ ಮನವಿಯನ್ನು ಮಾಡಿರುತ್ತಾರೆ, ಅಲ್ಲದೆ ಕಾಡಾನೆಗಳನ್ನು ಕಾಡಿಗೆ ಓಡಿಸುವ ಕಾರ್ಯಕ್ಕೆ ಸಹಕಾರ ನೀಡುವಂತೆ ಅರಣ್ಯಾಧಿಕಾರಿ ರತನ್ ಕುಮಾರ್ ಕೋರಿರುತ್ತಾರೆ.
Back to top button
error: Content is protected !!