ಪ್ರತಿಭೆ

ಕೊಡಗಿನ ಸ್ಪೀಡ್ ಸ್ಕೇಟರ್ಸ್ ಗಳ ಸಾಧನೆ

ಕುಶಾಲನಗರ, ಅ 12: ಅಕ್ಟೋಬರ್ ೧೧ ರಂದು ಗೋಲ್ಡನ್ ಬೀ ಗ್ಲೋಬಲ್ ಶಾಲಾ ವತಿಯಿಂದ ಬೆಂಗಳೂರಿನ ಹೊರಮಾವು ಆವರಣ ದಲ್ಲಿ ನಡೆಸಿದ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆ ಯಲ್ಲಿ  ಕುಶಾಲನಗರದ ಏಂಜೆಲ್ಸ್ ವಿಂಗ್ಸ್ ಸಂಸ್ಥೆಯ ವಿದ್ಯಾರ್ಥಿ ಗಳಾದ ಲಿಯೋನಲ್ ಲೂಕ್ ಡಿಸೋಜಾ, ದಿತ್ತ್ವಿ ರಾಮ್ ೧೦ ವರ್ಷದ ಒಳಗಿನ ವಯೋಮಿತಿ ಸ್ಪರ್ಧೆ ಯಲ್ಲಿ ಪಾಲ್ಗೊಂಡು ೪ ನೇ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾದರು. ೧೨ ವರ್ಷದ ಒಳಗಿನ ವಯೋಮಿತಿಯ ಹೆಣ್ಣು ಮಕ್ಕಳ ಸ್ಪರ್ಧೆ ಯಲ್ಲಿ ಸಾದನಾ ತೊರೆನೂರ್ ಭಾಗವಹಿಸಿ ಮೊದಲನೇ ಸ್ಥಾನ ದೊಂದಿಗೆ ಚಿನ್ನದ ಪದಕವನ್ನು ಗಳಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ೧೪ ವರ್ಷದಳಗಿನ ವಯೋಮಿತಿಯಲ್ಲಿ ಹೆಣ್ಣು ಮಕ್ಕಳ ವಿಭಾಗದಲ್ಲಿ ಧನ್ವಿತ ಈ ಡಿ ಎರಡನೇ ಸ್ಥಾನ ಗಳಿಸುವ ಮೂಲಕ ಬೆಳ್ಳಿಯ ಪದಕವನ್ನು ಹಾಗೆಯೇ ಗಂಡು ಮಕ್ಕಳ ವಿಭಾಗದಲ್ಲಿ ಪ್ರೀತಂ ಜಿ ಹೆಚ್ ಭಾಗವಹಿಸಿ ತೃತೀಯ ಸ್ಥಾನ ವನ್ನು ಪಡೆದು ಕಂಚಿನ ಪದಕಕ್ಕೆ ಭಾಜನರಾಗಿರುತ್ತಾರೆ. ಇವರುಗಳು ರೋಲರ್ ಸ್ಕೇಟಿಂಗ್ ಹಾಗೂ ಬ್ಯಾಂಡಿ (ಐಸ್ ಬಾಲ್ ಹಾಕಿ) ಕೋಚ್ ಗಳಾದಂಥಹ ಅನೂಪ್ ಡಿಸೋಜಾ ಮತ್ತು ಸಾವಿಯೊ ಅವರ ನೇತೃತ್ವದಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!