ಸಭೆ

ನಂಜರಾಯಪಟ್ಟಣ ಗ್ರಾಪಂ ನಲ್ಲಿ ನಡೆದ ಜಮಾಬಂದಿ ಕಾರ್ಯಕ್ರಮ

ಕುಶಾಲನಗರ., ಸೆ. 24: ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ
ಜಮಾಬಂದಿ ಸಭೆಯು ಗ್ರಾಮ ಪಂಚಾಯಿತಿ ಕಚೇರಿಯ ಮೇಲ್ಭಾಗದ ಸಭಾಂಗಣದಲ್ಲಿ ತಾಲ್ಲೂಕು ಸಹಾಯಕ ನಿರ್ದೇಶಕರಾದ ಪಿ.ವಿ. ಶ್ರೀನಿವಾಸ್ ನವರ ಅಧ್ಯಕ್ಷತೆಯಲ್ಲಿ ಜರುಗಿತ್ತು. ,
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ .ಸಿಎಲ್.ವಿಶ್ವ ರವರ ಉಪಸ್ಥಿತಿಯಲ್ಲಿ ಸಭೆಯನ್ನು ನಡೆಸಲಾಯಿತು.
2024-25ನೇ ಸಾಲಿನ ಜಮಾಬಂದಿ ವರದಿಯನ್ನು ಸಭೆಯಲ್ಲಿ ಮಂಡನೆ ಮಾಡಿ , ವಿವಿಧ ಕಾಮಗಾರಿಗಳು ನಡೆದಿರುವ ವರದಿಯನ್ನು ಸಭೆಯಲ್ಲಿ ಓದಿ ಚರ್ಚಿಸಿ, ಅನುಮೋದನೆ ಮಾಡಲಾಯಿತು .
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್, ಕಾರ್ಯದರ್ಶಿ ಸೇರಿದಂತೆ ಸಿಬ್ಬಂದಿಗಳು, ಗ್ರಾಮಸ್ಥರುಗಳು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!