ಮನವಿ

ನಿಸರ್ಗಧಾಮ ಹಾಗೂ ದುಬಾರೆಯಲ್ಲಿ ಪೊಲೀಸ್ ಹೊರಠಾಣೆಗೆ ಆಗ್ರಹ

ಕುಶಾಲನಗರ, ಸೆ 18 ಕೊಡಗು ಜಿಲ್ಲೆಯ ಪ್ರವಾಸೋದ್ಯಮ ತಾಣಗಳ ಪೈಕಿ ಅತ್ಯಂತ ಹೆಚ್ಚು ಪ್ರವಾಸಿಗರು ಭೇಟಿ ಕೊಡುವ ಕುಶಾಲನಗರದ ಕಾವೇರಿ ನಿಸರ್ಗಧಾಮ ಹಾಗೂ ದುಬಾರೆ ಸಾಕಾನೆ ಶಿಬಿರದ ಎರಡೂ ಕಡೆಗಳಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಪೊಲೀಸ್ ಹೊರ ಠಾಣೆ ಆರಂಭಿಸಬೇಕೆಂದು ಕುಶಾಲನಗರದ ಪ್ರವಾಸೋದ್ಯಮಿ ಕಿಂಗ್ಸ್ ವೇ ದಾವುದ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ವಾರಾಂತ್ಯದಲ್ಲಿ ಹಾಗೂ ರಜೆ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದಾಗ ಗುಂಪುಗಳಲ್ಲಿನ ಮಕ್ಕಳು ಹಾಗೂ ಮಹಿಳೆಯರಾದಿಯಾಗಿ ಅಗಲುವ ಕಾರಣ ದೂರದಿಂದ ಧಾವಿಸುವ ಪ್ರವಾಸಿ ಕುಟುಂಬಗಳು ಹಾಗೂ ಗುಂಪುಗಳ ಮಂದಿಗೆ ಆತಂಕ ದೂರ ಮಾಡಿ ಅನುಕೂಲ ಒದಗಿಸಲು ಪೋಲೀಸ್ ಹೊರಠಾಣೆ ಅನುಕೂಲ ವಾಗಲಿದೆ ಎಂದು ಕೋರಿರುವ ದಾವುದ್ ಈ ಬಗ್ಗೆ ಹಿರಿಯ ಪೋಲೀಸ್ ಅಧಿಕಾರಿಗಳು ಈ ಬಗ್ಗೆ ಪರಿಸ್ಥಿತಿ ಅಧ್ಯಯನ ಮಾಡಿ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!