ಸಿದ್ದಾಪುರ, ಸೆ 17:: ಪ್ರವಾದಿ ಮುಹಮ್ಮದ್ (ಸ ಅ ) ರವರ 1500 ನೇ ಜನ್ಮ ದಿನದ ಪ್ರಯುಕ್ತ ನೆಲ್ಯಹುದಿಕೇರಿ ದಾರುನ್ನಜಾತ್ ವಿದ್ಯಾಸಂಸ್ಥೆ, ಎಸ್ ವೈ ಎಸ್ ಇಸಾಬ, ಸಾಂತ್ವನ ತಂಡ, ಎಸ್ ಎಸ್ ಎಫ್ ಹಾಗೂ ಮುಸ್ಲಿಂ ಜಮಾಹತ್ ಸಂಯುಕ್ತ ಆಶ್ರಯದಲ್ಲಿ ನೆಲ್ಯಹುದಿಕೇರಿಯ ಕಾವೇರಿ ಸೇತುವೆಯ ಸಮೀಪದ ಮುಖ್ಯ ರಸ್ತೆ ಬದಿಯಲ್ಲಿ ಕಾಡು ಕಡಿದು ಸ್ವಚ್ಛತಾ ಕಾರ್ಯ ನಿರ್ವಹಿಸಿದರು.
ಈ ಸಂಧರ್ಭದಲ್ಲಿ ಧಾರುನ್ನಜಾತ್ ವಿದ್ಯಾಸಂಸ್ಥೆ ಅಧ್ಯಕ್ಷ ಸಿ ಎಂ ಮಜೀದ್, ಉಪಾಧ್ಯಕ್ಷ ಕೆ ಎಸಯ್ಯದ್ ಬಾವ, ಕಾರ್ಯದರ್ಶಿ ಮುಸ್ತಫಾ, ಸಾಂತ್ವನ ತಂಡದ ಪದಾಧಿಕಾರಿಗಳಾದ ರಫೀಕ್,ಜಂಶೀರ್, ರಶೀದ್, ರಫೀಕ್ ಗ್ಯಾಲಕ್ಷಿ, ಮುಸ್ತಫಾ ಹಾಕತ್ತೂರು ಸೇರಿದಂತೆ ಇನ್ನಿತರರು ಹಾಜರಿದ್ದರು.
Back to top button
error: Content is protected !!