ಕುಶಾಲನಗರ ಆ 26: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸವಾಳ ಗ್ರಾಮದಲ್ಲಿ ಬೆಳಗಿನ ಜಾವ ಕಾಡಾನೆ ದಾಳಿ ನಡೆಸಿದೆ. ಗ್ರಾಮದ ಪಿ.ಕೆ. ರಾಮನ್ ಎಂಬವರ ಮನೆ ಹತ್ತಿರಕ್ಕೆ ಮುಂಜಾನೆ ಕಾಡಾನೆ ಲಗ್ಗೆಯಿಟ್ಟಿದೆ. ಇದರಿಂದ ಎಚ್ಚರಗೊಂಡ ನಿವಾಸಿಗಳು ಹಿಂಬಾಗಿಲು ತೆರೆದು ನೋಡಿದಾಗ ಹಿಂಬದಿ ಕಾಡಾನೆ ಪ್ರತ್ಯಕ್ಷವಾಗಿದೆ. ಇದೇ ಸಂದರ್ಭ ಕಾಡಾನೆ ದಂತದಿಂದ ಮನೆಯ ಗೋಡೆ ಹಾಗೂ ಶೀಟ್ ಗೆ ಹಾನಿಗೊಳಿಸಿ ತೆರಳಿದೆ.
ಕೆಲ ತಿಂಗಳ ಹಿಂದೆ ಇದೇ ರಾಮನ್ ಅವರ ಮನೆಯ ಕಾಂಪೌಂಡ್ ಗೆ ಗುದ್ದಿ ಕಾಡಾನೆ ನೆಲಸಮಗೊಳಿಸಿತ್ತು.
Back to top button
error: Content is protected !!