ಕುಶಾಲನಗರ, ಜು 20: ಕೊಡಗು ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘ ಮತ್ತು ಪುಷ್ಪಗಿರಿ ಛಾಯಾಗ್ರಾಹಕರ ಸಂಘ ಸೋಮವಾರಪೇಟೆ ತಾಲೂಕು ಇವರ ಸಂಯುಕ್ತ ಆಶ್ರಯದಲ್ಲಿ ಫೋಟೋಶಾಪ್ ಮತ್ತು ವಿಡಿಯೋ ಎಡಿಟಿಂಗ್ ಮತ್ತು ಫೋಟೋಗ್ರಫಿಯಲ್ಲಿ Ai ನ ಬಳಕೆ ಈ ವಿಚಾರವಾಗಿ ಕಾರ್ಯಗಾರ ಸೋಮವಾರಪೇಟೆ ಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ನಿರೂಪಣೆಯನ್ನು ಕೊಡಗು ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಡೇವಿಡ್ ನಿರ್ವಹಿಸಿದರು. ಮಾಜಿ ಜಿಲ್ಲಾ ಉಪಾಧ್ಯಕ್ಷ ಜನಾರ್ಧನ್ ರವರು ಸ್ವಾಗತಿಸಿದರು. ನಾಸಿರ್ ರವರು ಪ್ರಾರ್ಥನೆ ಮಾಡಿದರು. ಕಾರ್ಯಗಾರಕ್ಕೆ ಹಲವಾರು ಜಿಲ್ಲೆಗಳಿಂದ ಹಾಗೂ ಕೊಡಗಿನ ಎಲ್ಲಾ ಛಾಯಾಗ್ರಾಹಕರು ಆಗಮಿಸಿ ಇದರ ಸದುಪಯೋಗವನ್ನು ಪಡೆದುಕೊಂಡರು. ಕಾರ್ಯಕ್ರಮದ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಬಿಜೆಪಿ ಯುವ ಮೋರ್ಚ ಅಧ್ಯಕ್ಷರಾದ ಶ ಮಹೇಶ್ ತಿಮ್ಮಯ್ಯ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಅಪ್ಡೇಟ್ ಆಗಲೇಬೇಕು ಈ ನಿಟ್ಟಿನಲ್ಲಿ ಛಾಯಾಗ್ರಾಹಕರ ಸಂಘದವರು Ai ತಂತ್ರಜ್ಞಾನ ತರಬೇತಿ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಏಕೆಂದರೆ ಈಗಿನ ಕಂಪನಿಯ ಕ್ಯಾಮೆರಾ ಗಳು ಬಹಳ ದುಬಾರಿಯಾಗಿತ್ತು ಅಪ್ಡೇಟ್ ತಂತ್ರಜ್ಞಾನದ ಅಳವಡಿಸುತ್ತಾರೆ … ಛಾಯಾಗ್ರಕರಿಗೆ ಈ ರೀತಿ ತರಬೇತಿಯನ್ನ ನೀಡಿದಾಗ ಮಾತ್ರ ಸದುಪಯೋಗ ಪಡೆದುಕೊಳ್ಳಬಹುದು. ವೃತ್ತಿಬಾಂಧವರು ಗ್ರಾಹಕರಿಗೆ ತಮ್ಮ ಫೋಟೋಗಳನ್ನು ಕ್ವಾಲಿಟಿಯನ್ನು ನೀಡಬೇಕಾಗುತ್ತದೆ.ಏಕೆಂದರೆ ಈಗ ಪೈಪೋಟಿ ಯುಗವಾಗಿದೆ. ಇವತ್ತು ಯಾವುದೇ ಸಮಾರಂಭಗಳಲ್ಲಿ ಫೋಟೋಗ್ರಾಫಿಗೆ ಡಿಮ್ಯಾಂಡ್ ಇದೆ.. ಮದುವೆ ಎಂಬುವುದು ಅಥವಾ ಸರ್ಕಾರಿ ಕಾರ್ಯಕ್ರಮಗಳು ಇರಬಹುದು ನಿಮಗೆ ಬಹಳ ಬೇಡಿಕೆ ಈ ನಿಟ್ಟಿನಲ್ಲಿ ಸಮಾಜಕ್ಕೆ ಬಹು ಮುಖ್ಯ ಪಾತ್ರ ವಹಿಸುತ್ತದೆ. ಫೋಟೋಗ್ರಾಫಿ ಟ್ರೈನಿಂಗ್ ನೀಡಲು ಬಹು ದೂರದಿಂದ ಬಂದಂತ ತರಬೇತಿದಾರರು ಅವರ ದೃಷ್ಟಿಕೋನ ಪ್ರತಿಯೊಬ್ಬ ಕಲಿಯುವಂತಹ ಛಾಯಾಗ್ರಾಕರಿಗೂ ಮತ್ತು ಅನುಭವ ಇರುವ ವೃತ್ತಿಬಾಂಧವರಿಗೂ ಹೊಸ ತಂತ್ರಜಾನದ ಅನುಭವ ನೀಡುವ ಭರವಸೆಯನ್ನ ಮಹೇಶ್ ತಿಮ್ಮಯ್ಯ ಅವರು ಯವರು ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುಷ್ಪಗಿರಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ವಿನಯ್ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊಡಗು ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಆವರ್ತಿ ಆರ್ ಮಹದೇವಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾರ್ಯಗಾರದ ತರಬೇತಿದಾರರಾದ ಅಭಿನಂದ ಮಹಾದೇವಪ್ಪ, ಪ್ರವೀಣ್, ವಿಜಯ್ ಸೋವರ್ ತರಬೇತಿ ನೀಡಿದರು. ಮುಖ್ಯ ಉಪಸ್ಥಿತಿ ಕರ್ನಾಟಕ ರಾಜ್ಯ ಛಾಯಾಗ್ರಾಹಕರ ಸಂಘದ ನಿರ್ದೇಶಕರಾದ ದೀಪಕ್, ಕೊಡಗು ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ವಸಂತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಲವ ಕುಮಾರ್, ಪುಷ್ಪಗಿರಿ ಛಾಯಾಗ್ರಾಹಕರ ಸಂಘದ ಪ್ರಧಾನ ಕಾರ್ಯದರ್ಶಿ ಅಭಿ, ಖಜಾಂಚಿ ಅರುಣ್, ದಕ್ಷಿಣ ಕೊಡಗು ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ರವೀಂದ್ರ, ಪ್ರೊಫೆಷನಲ್ ಫೋಟೋಗ್ರಾಫರ್ ಸಂಘದ ಅಧ್ಯಕ್ಷರಾದ ಅಂತೋನಿ ಜೋಬಿ, ಮಂಜಿನ ನಗರಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ಪ್ರದೀಪ್ ಮರಗೋಡು, ಶ್ರೀ ಕಾವೇರಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ವಿಜಯಕುಮಾರ್, ಕಾರ್ಮಿಕ ಇಲಾಖೆಯ ವಾಣಿ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
Back to top button
error: Content is protected !!