ಅಪಘಾತ

ಎಟಿಎಂ ಘಟಕದಲ್ಲಿ ಬೆಂಕಿ: ಸಮಯಪ್ರಜ್ಞೆ ಮೆರೆದ ಸಮಾಜ ಸೇವಕ ಶರತ್

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾಧ್ಯಕ್ಷ ಹಾಗೂ ಚೇತನ ಶುಂಠಿ ಶುದ್ಧೀಕರಣ ಘಟಕದ ಮಾಲೀಕ ಶರತ್ ಕುಮಾರ್ ಹೆಚ್ ಜೆ ಅವರಿಂದ ಹೆಬ್ಬಾಲೆ ಯ ATM ನಲ್ಲಿ ಬೆಂಕಿ ನಂದಿಸಲು ಹರಸಾಹಸ

ಕುಶಾಲನಗರ, ಆ 19: ಹೆಬ್ಬಾಲೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಇರುವ ಇಂಡಿಯಾ ಬ್ಯಾಂಕ್ ನ ಎ.ಟಿ.ಎಂ ಗೆ ಸೋಮವಾರ ರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯುತ್ತಿದ್ದು ಇದರ ಮಾಹಿತಿ ತಿಳಿದ ಹೆಬ್ಬಾಲೆಯ ಸಮಾಜ ಸೇವಕ ಹಾಗೂ ಚೇತನ ಶುಂಠಿ ಶುದ್ದೀಕರಣ ಘಟಕದ ಮಾಲೀಕ ಹೆಬ್ಬಾಲೆಯ ಪ್ರಾಥಮಿಕ ಕೃಷಿ ಪತ್ತಿನ ನಿರ್ದೇಶಕ ಶರತ್ ಕುಮಾರ್ ಹೆಚ್ ಜೆ ಮತ್ತು ಅವರ ಸ್ನೇಹಿತರ ಜೊತೆಗೂಡಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಶರತ್ ಕುಮಾರ್ ಅವರು ತಕ್ಷಣ ಅಗ್ನಿಶಾಮಕ ಠಾಣಾ ಸಿಬ್ಬಂದಿಯವರಿಗೆ ದೂರವಾಣಿ ಮೂಲಕ ಮಾಹಿತಿ ತಿಳಿಸಿದರು. ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದವರು ಆಗಮಿಸಿ ಬೆಂಕಿ ನಂದಿಸಲು ಕಾರ್ಯಾಚರಣೆ ಮಾಡಿದರು. ನಂತರ ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ರಾಮಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೊಡಗು ಜಿಲ್ಲೆಯ ಜಿಲ್ಲಾಧ್ಯಕ್ಷ ಶರತ್ ಕುಮಾರ್ ಹೆಚ್ ಜೆ ಹಾಗೂ ಅವರ ಸ್ನೇಹಿತರು ಬೆಂಕಿ ನಂದಿಸುವ ಕಾರ್ಯಚಣೆ ಮಾಡಿರುವುದರಿಂದ ಹೆಬ್ಬಾಲೆ ಯುವಕರು ಹಿರಿಯರು ಮತ್ತು ಗ್ರಾಮಸ್ಥರಿಂದ ಅಭಿನಂದನೆ ಸಲ್ಲಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!