ಕಾರ್ಯಕ್ರಮ

ಕುಶಾಲನಗರದಲ್ಲಿ ರೋಟರಿ ಕ್ಲಬ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಕುಶಾಲನಗರ: ರೋಟರಿ ಕ್ಲಬ್ ಕುಶಾಲನಗರ ವತಿಯಿಂದ ಇಂದು ಬೆಳಿಗ್ಗೆ 9 ಗಂಟೆಗೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಭವ್ಯವಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಕ್ಲಬ್ ಅಧ್ಯಕ್ಷ ರೋಟೇರಿಯನ್ ಮನು ಪೆಮ್ಮಯ್ಯ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು .
ಅವರು ಮಾತನಾಡುತ್ತ

“ಸ್ವಾತಂತ್ರ್ಯ ಎಂದರೆ ಕೇವಲ ಗಡಿ, ಧ್ವಜ ಅಥವಾ ಹಬ್ಬವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಗೌರವ, ಶಿಕ್ಷಣದ ಶಕ್ತಿ ಮತ್ತು ಭಯವಿಲ್ಲದ ಬದುಕಿನ ಸಂತೋಷ. ನಮ್ಮ ಹೋರಾಟಗಾರರು ಹೇಗೆ ಮುಂದಿನ ಪೀಳಿಗೆಯ ಒಳಿತಿಗಾಗಿ ಹೋರಾಡಿದರೋ, ಹಾಗೆಯೇ ನಾವು ರೊಟೇರಿಯನ್ಸ್ ‘Service Above Self’ ಧ್ಯೇಯವನ್ನು ಪಾಲಿಸಿ ಸಮಾಜದ ಒಗ್ಗಟ್ಟಿಗೆ ಶ್ರಮಿಸಬೇಕು” ಎಂದು ಹೇಳಿದರು.

ರೋಟೇರಿಯನ್ ಡಾ. ಹರಿ ಎ. ಶೆಟ್ಟಿ ಅವರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಧೈರ್ಯ ಹಾಗೂ ನಿಸ್ವಾರ್ಥ ಸೇವೆಯ ಕುರಿತು ಪ್ರೇರಣಾದಾಯಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ರೋಟೇರಿಯನ್‌ಗಳು — ಮಂಜುನಾಥ ಎಚ್.ಪಿ. (ಕಾರ್ಯದರ್ಶಿ), ಉಲ್ಲಾಸ್ ಕೃಷ್ಣ (ಅಸಿಸ್ಟೆಂಟ್ ಗವರ್ನರ್), ಹರೀಶ್ ಸಿ.ಬಿ., ರಂಗನಾಥ, ಪ್ರಕಾಶ್, ಶಿಬು ಥಾಮಸ್, ರಿಚರ್ಡ್ ಡಿ’ಸೋಜಾ, ರಮೇಶ್ ಕುಮಾರ್, ರಶೀದ್, ರಾಜಶೇಖರ್, ಚಂದ್ರಶೇಖರ್, ರಂಗಸ್ವಾಮಿ, ಡಾ. ದರ್ನೇಂದ್ರ, ನವೀನ್ — ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ದೇಶಭಕ್ತಿ ಗೀತೆಗಳನ್ನು ಹಾಡಿ, ಎಲ್ಲರೂ “ಜಯ ಭಾರತ್, ಜಯ ಹಿಂದ್” ಎಂದು ಘೋಷಣೆ ಮಾಡಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!