ಕುಶಾಲನಗರ, ಏ 07:ದ್ವಿಶತಮಾನೋತ್ಸವ ಅಂಚಿನಲ್ಲಿರುವ ಕುಶಾಲನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಆಚರಣೆ ಹಾಗೂ ಕಟ್ಟಡ ನಿರ್ಮಾಣ ಅಂಗವಾಗಿ ಹಳೆಯ ವಿದ್ಯಾರ್ಥಿಗಳ ಸಭೆ ಏ.13 ರಂದು ಭಾನುವಾರ ಏರ್ಪಡಿಸಲಾಗಿದೆ ಎಂದು ಶತಮಾನೋತ್ಸವ ಆಚರಣಾ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ತಿಳಿಸಿದರು.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಋಣಸಂದಾಯ ರೂಪದಲ್ಲಿ ಶತಮಾನೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ,ಸಮಾಜಮುಖಿಯಾಗಿ ಆಚರಿಸಲು ಶಾಲೆಯ ಹಳೆಯ ವಿದ್ಯಾರ್ಥಿಗಳ ತಂಡ ಈಗಾಗಲೆ ನಿರ್ಧರಿಸಿದೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಆರ್.ಗುಂಡುರಾವ್ ರಂತಹ ಅತಿರಥ ಮಹಾರಥರನ್ನು ಒಳಗೊಂಡಂತೆ ಲಕ್ಷಾಂತರ ಮಂದಿ ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ಅತ್ಯುನ್ನತ ಪದವಿಗಳನ್ನು ಅಲಂಕರಿಸಿ ವಿವಿಧ ಕ್ಷೇತ್ರಗಳಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಶತಮಾನೋತ್ಸವ ಆಚರಣೆಗೆ 2011 ರಲ್ಲಿ ಸಂಘವನ್ನು ನೊಂದಾಯಿಸಿಕೊಂಡು ಸಿದ್ದತೆ ನಡೆಸಿ ರೂಪುರೇಷೆಗಳನ್ನು ಸಿದ್ದಪಡಿಸಲಾಗಿತ್ತು. ಮೂರು ಕೋಟಿ ವೆಚ್ಚದಲ್ಲಿ ಬೃಹತ್ ಸಭಾಂಗಣ ಒಳಗೊಂಡ ಬಹುಪಯೋಗಿ ಕಟ್ಟಡ ನಿರ್ಮಿಸಲು ನೀಲಿನಕ್ಷೆ ಸಿದ್ದಪಡಿಸಲಾಗಿತ್ತು. ಶಿಥಿಲಾವಸ್ಥೆಯ ಹಳೆಯ ಸಭಾಂಗಣ ಕೆಡವಲು ಅನುಮತಿ ದೊರೆಯದ ಕಾರಣ ಆ ಯೋಜನೆ ನೆನೆಗುದಿಗೆ ಬಿದಿತ್ತು. ಇದೀಗ ಅದಕ್ಕೆ ಮತ್ತೆ ಚಾಲನೆ ನೀಡಲಾಗುತ್ತಿದೆ ಇಂದಿನ ಕಾಲಘಟ್ಟಕ್ಕೆ ಯೋಜನಾವೆಚ್ಚದಂತೆ 8 ಕೋಟಿ ಮೊತ್ತಕ್ಕೆ ಕಡಿಮೆಯಿಲ್ಲದಂತೆ ಶತಮಾನೋತ್ಸವ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಇದರ ಅಂಗವಾಗಿ ಏಪ್ರಿಲ್ 13 ರಂದು ಹಳೆಯ ವಿದ್ಯಾರ್ಥಿಗಳ ಸಭೆ ಕರೆಯಲಾಗಿದೆ. ಶಾಲೆಯ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ಸಭೆ ನಡೆಯಲಿದ್ದು, ಹಳೆಯ ವಿದ್ಯಾರ್ಥಿ ಸಭೆಗೆ ಹಾಜರಾಗಿ ಸೂಕ್ತ ಸಲಹೆ ನೀಡಬೇಕು. ಜೊತೆಗೆ ಸದಸ್ಯತ್ವ ನೊಂದಣಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಶತಮಾನೋತ್ಸವ ಆಚರಣಾ ಸಮಿತಿ ಗೌರವಾಧ್ಯಕ್ಷರಾಗಿ ನಜೀರ್ ಅಹಮ್ಮದ್ ,ಅಧ್ಯಕ್ಷರಾಗಿ ವಿ ಪಿ ಶಶಿಧರ್,ಗೌರವಾಧ್ಯಕ್ಷರಾಗಿ ನಿವೃತ್ತ ಶಿಕ್ಷಕರಾದ ನಜೀರ್ ಅಹ್ಮದ್, ಉಪಾಧ್ಯಕ್ಷರಾಗಿ, ಎಂ ವಿ ನಾರಾಯಣ,ಎಂ ಕೆ ದಿನೇಶ್ ಟಿ ಆರ್ ಶರವಣ ಕುಮಾರ್, ಕಾರ್ಯದರ್ಶಿಯಾಗಿ ವಕಿಲರಾದ ಆರ್ ಕೆ ನಾಗೇಂದ್ರ ಬಾಬು, ಖಜಾಂಚಿಯಾಗಿ ಎಸ್ ಕೆ ಸತೀಶ್ ಸಂಚಾಲಕರಾಗಿ ಜೋಸೆಪ್ ಸೋನ್ಸ್ ವಿಕ್ಟರ್, ಸಹ ಕಾರ್ಯದರ್ಶಿ ಎಂ ವಿ ಮೊಯ್ದು, ಮಾಧ್ಯಮ ಕಾರ್ಯದರ್ಶಿಗಳಾಗಿ ಬಿ ಎಸ್ ಲೋಕೇಶ್ ಸಾಗರ್ ಹಾಗು ಶ್ರೀಮತಿ ವನಿತ ಚಂದ್ರಮೋಹನ್, ಸದಸ್ಯರಾಗಿ ವಿ ಡಿ ಪುಂಡರೀಕಾಕ್ಷ ವಿ ಎಸ್,ಆನಂದ ,ಬಿ ಆರ್ ನಾಗೇಂದ್ರ ಪ್ರಸಾದ್, ,ಹೆಚ್ ಟಿ ವಸಂತ್ ,ಚ್ ಎನ್ ಚಂದ್ರು, ಡಿ ವಿ ರಾಜೇಸ್, ಬಿ,ಶಬೀರ್ ಆಹಮದ್ ,ಲತಾ ನಂದಕುಮಾರ್,ವಿಜಯ್ ಕುಮಾರ್,ಬಿ ಎಸ್ ಚಂದನ್,ಇಮ್ಯಾನ್ಯುಯಲ್ ಅಂತೋಣಿ,ಎಂ ಡಿ ರಂಗಸ್ವಾಮಿ,ಶಾಲೆಯ ಮುಖ್ಯೋಪಾಧ್ಯಾಯರು,ಸೇರಿದಂತೆ ಮೂವತ್ತು ಜನರು ಸಮಿತಿಯನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಸಮಿತಿಯ ಮುಖಂಡರಾದ ಎಂ.ಕೆ.ದಿನೇಶ್, ಎಸ್.ಕೆ.ಸತೀಶ್, ಎಂ.ಇ.ಮೋಹಿದ್ದೀನ್, ಎಂ.ವಿ.ನಾರಾಯಣ್, ವನಿತಾ ಚಂದ್ರಮೋಹನ್, ಹೆಚ್.ಎಂ.ಚಂದ್ರು,ವಿ.ಎಸ್.ಆನಂದ್ ಕುಮಾರ್, ಹೆಚ್.ಟಿ.ವಸಂತ್, ಚಂದನ್ ಕುಮಾರ್ ಇತರರು ಇದ್ದರು.
Back to top button
error: Content is protected !!