ಸುದ್ದಿಗೋಷ್ಠಿ

ಆ.23 ರಂದು ಹುದುಗೂರಿನಲ್ಲಿ ನಾಟಿ ಹಬ್ಬ-ಕೆಸರುಗದ್ದೆ ಕ್ರೀಡಾಕೂಟ

ಕುಶಾಲನಗರ, ಜು 24: ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ (ರಿ) ವತಿಯಿಂದ 7 ನೇ ವರ್ಷದ ನಾಟಿ ಹಬ್ಬ ಮತ್ತು ಕೆಸರುಗದ್ದೆ ಕ್ರೀಡಾಕೂಟವನ್ನು ಆಗಸ್ಟ್ 23 ರಂದು ಹುದುಗೂರಿನ ಐಮುಡಿಯಂಡ ಗಣೇಶ್ ರವರ ಗದ್ದೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ತಿಳಿಸಿದರು.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ 2018 ರಲ್ಲಿ ಸ್ಥಾಪನೆಯಾಗಿದ್ದು. ಅಸೋಸಿಯೇಷನ್ ವತಿಯಿಂದ ವಿವಿಧ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು. ತಾಂತ್ರಿಕತೆ, ವೈಜ್ಞಾನಿಕತೆಯಿಂದಾಗಿ ಗ್ರಾಮೀಣ ಕ್ರೀಡೆಗಳನ್ನೇ ಮರೆತಿರುವ, ಮೊಬೈಲ್​ಗೆ ಜೋತು ಬಿದ್ದು ಅಂಗಳಕ್ಕಿಳಿಯಲೂ ಹಿಂದೆ ಮುಂದೆ ನೋಡುವ ಮಕ್ಕಳು, ಯುವಕರನ್ನು ಗ್ರಾಮೀಣ ಕ್ರೀಡೆಗಳತ್ತ ಆಕರ್ಷಿಸಿ ಉತ್ತೇಜಿಸುವ ಉದ್ದೇಶದಿಂದ ಹಾಗೂ ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ನೆನಪಿಟ್ಟುಕೊಳ್ಳುವುದು ಮತ್ತು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ನಾಟಿ ಹಬ್ಬ ಮತ್ತು ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.
ಗ್ರಾಮೀಣಾ ಭಾಗದಲ್ಲಿ ಕೆಸರುಗದ್ದೆ ಕ್ರೀಡಾಕೂಟ ನಡೆಸುವುದರಿಂದ ಈ ಭಾಗದ ಪ್ರತಿಭಾನಿತ್ವ ಕ್ರೀಡಾಪಟುಗಳಿಗೆ ಉತ್ತಮ ವೇದಿಯಾಗಲಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕೆಂದು ಶ್ರೀನಿಧಿ ಲಿಂಗಪ್ಪ ಮನವಿ ಮಾಡಿದರು.
ಈ ಸಂದರ್ಭ ಯಂಗ್ ಇಂಡಿಯಾ ಫಾರ್ಮರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಸಜನ್ ಮಂದಣ್ಣ, ಖಜಾಂಚಿ ಮೋಹಿತ್ ತಿಮ್ಮಯ್ಯ, ಸಂಚಾಲಕ ಆದರ್ಶ್ ತಮ್ಮಯ್ಯ, ವಿನಯ್ ಕುಶಾಲಪ್ಪ, ಪಧಾಧಿಕಾರಿಗಳಾದ ಸಮರ್ಥ್, ಜೈ ಕೀರ್ತಿ, ಅಭಿಷೇಕ್, ಸ್ವಾಗತ್ ಕುಶಾಲಪ್ಪ, ಅನಂತ್ ಈರಪ್ಪ, ಪ್ರದೀಪ್ ಮತ್ತಿತರರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!