ಅವ್ಯವಸ್ಥೆ

ಹಾರಂಗಿ-ಯಡವನಾಡು ಮಾರ್ಗದಲ್ಲಿ ಸಂಚಾರ ದುಸ್ಥರ ಆರೋಪ: ಸ್ಪಂದಿಸದ ಅಧಿಕಾರಿಗಳ ವಿರುದ್ದ ಆಕ್ರೋಷ

ಕುಶಾಲನಗರ, ಜು 04: ಹಾರಂಗಿಯಿಂದ ಹುದುಗೂರು-ಯಡವನಾಡು ಮೂಲಕ ಸೋಮವಾರಪೇಟೆ ಕುಶಾಲನಗರ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಸಂಚಾರ ದುಸ್ಥರವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ರಸ್ತೆಯು ಹಾರಂಗಿ ನೀರಾವರಿ ನಿಗಮದಿಂದ ಸುಮಾರು ಹತ್ತು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದು, ಈ ರಸ್ತೆಯು ತುಂಬಾ ಕಿರಿದಾದ ರಸ್ತೆಯಾಗಿದ್ದು ಕಾಂಕ್ರೀಟ್ ರಸ್ತೆ ಆದ ಕಾರಣ ಸುಮಾರು ಒಂದು ಅಡಿಗಳಷ್ಟು ದಪ್ಪ ಇರುವುದರಿಂದ ರಸ್ತೆ ಇಕ್ಕೆಲಗಳಲ್ಲಿ ಕತ್ತಿಯಂತ ಹರಿತವಿದ್ದು ಎರಡು ವಾಹನಗಳು ಮುಖಾಮುಖಿ ಚಲಿಸುವಾಗ ಒಂದು ವಾಹನ ರಸ್ತೆಯಿಂದ ಕೆಳಗೆ ಇಳಿಯಲೇಬೇಕು. ಅಂತಹ ಸಂದರ್ಭ ಚಾಲನೆಗೆ ಹಾಗೂ ವಾಹನಕ್ಕೆ ತುಂಬಾ ತೊಂದರೆಯಾಗುತ್ತಿದೆ‌. ಈ ರಸ್ತೆಯಲ್ಲಿ ಜನಗಳು ನಡೆದುಹೋಗಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಎರಡು ಕಡೆಗಳು ಮಣ್ಣಿನಿಂದ ಕೂಡಿದ್ದು ಕೆಸರುಮಯವಾಗಿದೆ. ಯಾವುದೇ ವಾಹನಗಳು ಚಲಿಸುವಾಗ ರಸ್ತೆಯಲ್ಲಿ ನಿಂತ ನೀರು ಮತ್ತು ಮಣ್ಣು ನಡೆದುಕೊಂಡು ಹೋಗುವ ಶಾಲಾ ಮಕ್ಕಳ ಮೇಲೆ ಎರಚುತ್ತಿದೆ. ಇದರಿಂದ ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗಿದ್ದು ಇದರ ಬಗ್ಗೆ ನೀರಾವರಿ ಇಲಾಖೆಯ ಎಲ್ಲಾ ಅಭಿಯಂತರರಿಗೂ, ಅಧಿಕಾರಿಗಳಿಗೂ ಮನವರಿಕೆ ಮಾಡಿ ಮಣ್ಣು ಹಾಕಲು ಮತ್ತು ರಸ್ತೆ ಬದಿಯಲ್ಲಿರುವ ಕಚಡ ತೆಗೆಯಲು ಮತ್ತು ರಸ್ತೆಯಲ್ಲಿ ನಿಂತಿರುವ ನೀರನ್ನು ಸಲೀಸಾಗಿ ಚರಂಡಿಗೆ ಹೋಗುವ ತರ ಮಾಡಲು ಎಷ್ಟೇ ಮನವಿ ಮಾಡಿದರೂ ಯಾವುದೇ ಪ್ರತಿಕ್ರಿಯೆ ತೋರದೆ ಇಲಾಖೆ ಜಾಣ ಕುರುಡಾಗಿ ವರ್ತಿಸುತ್ತಿದೆ ಎಂದು ದೂರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!