ಕುಶಾಲನಗರ, ಫೆ 12: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕುಶಾಲನಗರದಲ್ಲಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.
ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಕೇಂದ್ರದಲ್ಲಿರುವ. ಎಸ್. ಎಲ್. ಎನ್. ಕಾಫಿ ಎಂಪ್ಲಾಯೀಸ್ ಯೂನಿಯನ್ ಮತ್ತು ಮೈಸೂರು ವಿಭಾಗದ ಕೈಗಾರಿಕಾ ಕಾರ್ಮಿಕ ಯೂನಿಯನ್ ಸಹಕಾರದೊಂದಿಗೆ ಕೂಡ್ಲೂರು ಕೈಗಾರಿಕಾ ಘಟಕದ ಯೂನಿಯನ್ ಕಾರ್ಮಿಕರು ಕೈಗಾರಿಕಾ ಕೇಂದ್ರದಿಂದ ಕುಶಾಲನಗರ ತಾಲ್ಲೂಕು ತಹಸೀಲ್ದಾರ್ ಕಚೇರಿಯವರೆಗೆ
ಮೆರವಣಿಗೆ ಸಾಗಿ ತಹಸೀಲ್ದಾರ್ ಗೆ ಮನವಿ ಪತ್ರವನ್ನು ಸಲ್ಲಿಸಿದರು.
ಮನವಿಯಲ್ಲಿ ಕಾರ್ಮಿಕ ವಿರೋಧಿ ಸಂಹಿತೆಗಳನ್ನು ರದ್ದುಗೊಳಿಸಿ, ಕಾನೂನಾತ್ಮಕವಾಗಿ ದೊರೆಯಬೇಕಾದ ಎಲ್ಲಾ ಸೌಲಭ್ಯಗಳನ್ನು ನಿಯಮಾನುಸಾರ ನೀಡಬೇಕೆಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಎ.ಐ.ಟಿ.ಯು.ಸಿ ಮೈಸೂರು ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ಜೆ. ಸೋಮಶೇಖರ್ ಅರಸ್, ರಾಜ್ಯ ಸಮಿತಿ ಕಾರ್ಯದರ್ಶಿ ಹೆಚ್. ಬಿ. ರಾಮಕೃಷ್ಣ, ಎಸ್ . ಎಲ್. ಎನ್ ಕಾರ್ಮಿಕ ಘಟಕದ ಅಧ್ಯಕ್ಷ ಎಸ್. ಶಿವರಾಘವೇಂದ್ರ, ಡಿ.ಆರ್. ರವಿತೇಜ,ಎಸ್. ಆರ್. ಲೋಕೇಶ್, ಉಪ ಕಾರ್ಯದರ್ಶಿ ಕೆ.ಯು .ನವೀನ್, ಖಜಾಂಚಿ ಪ್ರದೀಪ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.
Back to top button
error: Content is protected !!