ಸಭೆ

ಕರವೇ ಸಭೆ: ಹೊಸ ಸದಸ್ಯರ ಸೇರ್ಪಡೆ: ಆಂಗ್ಲಭಾಷೆ ನಾಮಫಲಕ‌ ತೆರವಿಗೆ‌ ಕೋರಿ‌ ಮನವಿ ಸಲ್ಲಿಕೆ

ಕುಶಾಲನಗರ, ಡಿ 09:ಹೆಚ್ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ “ಕುಶಾಲನಗರ ನಗರ ಘಟಕ”ದ ಸಭೆ ಜಿಲ್ಲಾಧ್ಯಕ್ಷ ಬಿ.ಎ.ದಿನೇಶ್ ಮಾರ್ಗದರ್ಶನದಂತೆ ನಗರ ಅಧ್ಯಕ್ಷ ಎಂ.ಎಸ್. ಮಣಿಕಂಠ ಅವರ ಅಧ್ಯಕ್ಷತೆಯಲ್ಲಿ ಪ್ರವಾಸಿ ಮಂದಿರದಲ್ಲಿ ನಡೆಯಿತು.

ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ ಗೌಡ, ಜಿಲ್ಲಾ ಗೌರವಾಧ್ಯಕ್ಷ ಚಂದ್ರ, ಜಿಲ್ಲಾ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಪರಮೇಶ್, ಉಪಾಧ್ಯಕ್ಷ ಧನಪಾಲ್,ನಗರ ಗೌರವಾಧ್ಯಕ್ಷ ವಿ. ಕೃಷ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್, ತಾಲ್ಲೂಕು ಉಪಾಧ್ಯಕ್ಷ ಪ್ರಕಾಶ್ ಪುಟ್ಟ, ತಾಲ್ಲೂಕು ಸಂಚಾಲಕ ಚಂದ್ರು, ರಂಗಸ್ವಾಮಿ ಸೇರಿದಂತೆ ತಾಲ್ಲೂಕಿನ ಹಲವು ಪದಾಧಿಕಾರಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನರು ನಗರ ಅಧ್ಯಕ್ಷ ಮಣಿಕಂಠ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಗೆ ಸೇರಿದರು. ವೇದಿಕೆಯ ಪದಾಧಿಕಾರಿಗಳು ಕನ್ನಡ ಶಾಲು ಹಾಕುವ ಮೂಲಕ ರಕ್ಷಣಾ ವೇದಿಕೆಗೆ ಬರಮಾಡಿಕೊಂಡರು.
ಸಭೆಯಲ್ಲಿ ಕುಶಾಲನಗರದ ಹತ್ತು ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು.
ನಂತರ “ಕುಶಾಲನಗರದ ಸುತ್ತ ಮುತ್ತ ಹಲವು ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಕಟ್ಟಡಗಳು,ಹೋಟೆಲ್, ಲಾಡ್ಜ್, ರೆಸಾರ್ಟ್ ಗಳ ನಾಮಫಲಕಗಳಲ್ಲಿ ಕನ್ನಡಕ್ಕಿಂತ ಆಂಗ್ಲ ಭಾಷೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗಿದ್ದು, ಕೆಲ ವೊಂದು ನಾಮಫಲಕಗಳಲ್ಲಿ ಮಲಯಾಳಂ,ತಮಿಳು ಭಾಷೆಯ ಅಕ್ಷರಗಳು ಕಂಡುಬಂದಿವೆ.ಮುಂದಿನ ಒಂದು ತಿಂಗಳ ಒಳಗಾಗಿ ಪುರಸಭೆಯ ಅಧಿಕಾರಿಗಳು ಈ ನಾಮಫಲಕಗಳನ್ನು ತೆರವು ಮಾಡಬೇಕು, ಇಲ್ಲದಿದ್ದಲ್ಲಿ ನಾವೇ ನಮ್ಮ ಸಂಘಟನೆಯ ಕಾರ್ಯಕರ್ತರು ಪುರಸಭೆಯ ಮುಂದೆ ಪ್ರತಿಭಟನೆ ನಡೆಸಿ, ಇಂತಹ ನಾಮಫಲಕಗಳಿಗೆ ಕಪ್ಪು ಬಣ್ಣವನ್ನು ಬಳಿಯುವುದಾಗಿ ಎಚ್ಚರಿಸಿ, ಪುರಸಭೆಯ ಮುಖ್ಯಾಧಿಕಾರಿಗಳಿಗೆ ಲಿಖಿತವಾಗಿ ಒತ್ತಾಯ ಮಾಡಿ ಮನವಿ ಪತ್ರವನ್ನು ಕೊಡಲಾಯಿತು.
ಈ ಸಂಬಂಧ ಮುಖ್ಯಾಧಿಕಾರಿಗಳು ಈ ಬಗ್ಗೆ ಕೂಡಲೇ ಲಿಖಿತ ಆದೇಶ ನೀಡಲಾಗುವುದು,ಹಾಗೂ ಆ ಆದೇಶದ ಪ್ರತಿಯನ್ನು ತಮಗೂ ನೀಡುತ್ತೇವೆ ಎಂದು ಭರವಸೆ ನೀಡಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!