ಕುಶಾಲನಗರ, ಮಾ 28 : ತಾಲ್ಲೂಕು ಯೋಗಿನಾರೇಯಣ ಬಲಿಜ ಸಂಘದ ವತಿಯಿಂದ ಕುಲ ಗುರು ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮವನ್ನು ಕುಶಾಲನಗರದಲ್ಲಿ ಆಚರಿಸಲಾಯಿತು.
ಈ ಸಂದರ್ಭ ಮಾತನಾಡಿದ
ಸಂಘದ ಅಧ್ಯಕ್ಷ ಆರ್.ಬಾಬಣ್ಣ ಕುಶಾಲನಗರ ಹಾಗೂ ಸೋಮವಾರಪೇಟೆ ತಾಲ್ಲೂಕಿನಲ್ಲಿ 900 ಕ್ಕೂ ಹೆಚ್ಚು ಬಲಿಜ ಸಂಘದ ಕುಟುಂಬಗಳಿದ್ದು, ಪ್ರತೀ ವರ್ಷವೂ ಕುಲಗುರುಗಳ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಸಂಘದ ಸದಸ್ಯರ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವು ನೀಡುವುದರೊಂದಿಗೆ, ಸಮಾಜದ ಕಡುಬಡ ಕುಟುಂಬಗಳಿಗೆ ನೆರವು ನೀಡುವ ಕೆಲಸ ಸಮಾಜದಿಂದ ಆಗಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಂಘದ ಸದಸ್ಯರಾಗಬೇಕಿದೆ. ಹಾಗೆಯೇ ಸಮಾಜದ ಮಾಹಾನ್ ಪುರುಷರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ಕರೆಕೊಟ್ಟ ಸಂಘದ ಅಧ್ಯಕ್ಷ ಆರ್.ಬಾಬಣ್ಣ ಸಮಾಜ ಬಾಂಧವರು ರಾಜಕೀಯವಾಗಿಯೂ ಅಭಿವೃದ್ದಿ ಹೊಂದಬೇಕೆಂದು ಕರೆಕೊಟ್ಟರು.
ಈ ಸಂದರ್ಭ ಸಂಘದ ಸದಸ್ಯರಾದ ಕವಿತಾ ದಯಾನಂದ್ ಮಾತನಾಡಿದರು.
ಜಯಂತಿ ಅಂಗವಾಗಿ ಕೈವಾರ ತಾತಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಭಾವ ಚಿತ್ರಗಳನ್ನು ಸಂಘದ ಸದಸ್ಯ ಕುಟುಂಬಗಳಿಗೆ ವಿತರಿಸಲಾಯಿತು.
ಸಂಘದ ಗೌರವಾಧ್ಯಕ್ಷ ಬಾಲು ದಯಾನಂದ, ಉಪಾಧ್ಯಕ್ಷ ಬೈಲಕುಪ್ಪೆ ಗಣೇಶ್ ಸ್ವಾಮಿ, ಕಾರ್ಯದರ್ಶಿ ನಿರಂಜನ್, ಖಜಾಂಚಿ ಸತೀಶ್, ನಿರ್ದೇಶಕರಾದ ಜಯರಾಂ, ಜಗದೀಶ್, ಕವಿತಾ, ಮದನ್, ಧರ್ಮಣ್ಣ, ಕಿರಣ್, ತುಳಸಿ ಮೊದಲಾದವರಿದ್ದರು.
ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗೆ ತಂಪು ಪಾನೀಯವನ್ನು ವಿತರಿಸಲಾಯಿತು.
Back to top button
error: Content is protected !!