ಸಾಂಸ್ಕೃತಿಕ

ಸೋಮವಾರಪೇಟೆಯಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ: ‘ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ’ಗೆ ಪ್ರಥಮ ಸ್ಥಾನ

ಕುಶಾಲನಗರ, ಏ 17: ದಿನಾಂಕ: 16-04-2025 ರ ಬುಧವಾರ ಸೋಮವಾರಪೇಟೆ ಗಾಂಧಿನಗರ ಶ್ರೀ ದೊಡ್ಡ ಮಾರಿಯಮ್ಮ ದೇವಾಲಯ ಸಮಿತಿ 50 ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ” ರಾಜ್ಯಮಟ್ಟದ ಗುಂಪು ನೃತ್ಯ ಸ್ಪರ್ಧೆಯಲ್ಲಿ” ಕೂಡಿಗೆಯ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ತಂಡ ಮೈ ರೋಮಾಂಚನಗೊಳಿಸುವ ನೃತ್ಯ ಪ್ರಕಾರವನ್ನು ನೀಡಿ ಪ್ರಥಮ ಬಹುಮಾನ ತನ್ನದಾಗಿಸಿಕೊಂಡರು.

ನೃತ್ಯ ಸ್ಪರ್ಧೆಯಲ್ಲಿ ಜಿಲ್ಲೆಯ ಹಾಗೂ ರಾಜ್ಯದ ಹಲವೆಡೆಯಿಂದ ಕಾಲ ತಂಡಗಳು ಭಾಗವಹಿಸಿದ್ದವು. ಅದರಲ್ಲಿ ನೃತ್ಯ ಸಂಯೋಜಕ ಅಕ್ತರ್ ರವರ ನೇತೃತ್ವದ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯ ವಿದ್ಯಾರ್ಥಿಗಳು ತೀರ್ಪುಗಾರರ ಹಾಗೂ ನೆರೆದಿದ್ದ ಎಲ್ಲಾ ಜನರ ಮೆಚ್ಚುಗೆಗೆ ಪಾತ್ರರಾಗಿ ಪ್ರಥಮ ಬಹುಮಾನ ವಿಜೇತರಾದರು. ಇವರ ನೃತ್ಯವು ನೆರೆದಿದ್ದ ಎಲ್ಲರ ಗಮನ ಸೆಳೆಯಿತು. ಈ ನೃತ್ಯ ಸ್ಪರ್ಧೆಯ ತೀರ್ಪುಗಾರರಾಗಿ ಶ್ರೀ ಚಿಕ್ಕಮಗಳೂರಿನ ಸತೀಶ್ ಸುವರ್ಣ , ಶೃಂಗೇರಿಯ ಶ್ರೀ ಅವಿನಾಶ್, ಮಡಿಕೇರಿಯ ಶ್ರೀ ಮಹೇಶ್ ಮತ್ತು ಹಾಸನದ ಶ್ರೀ ಪವನ್ ನಾಲ್ಕು ಜನ ನೃತ್ಯ ಸಂಯೋಜಕರು ತೀರ್ಪುಗಾರರಾಗಿ ಆಗಮಿಸಿ ಉತ್ತಮ ತೀರ್ಪುಗಳನ್ನು ನೀಡಿದರು. ಈ ಕಾರ್ಯಕ್ರಮಕ್ಕೆ ಶ್ರೀ ದೊಡ್ಡ ಮಾರಿಯಮ್ಮ ದೇವಸ್ಥಾನದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು. ಕಾರ್ಯಕ್ರಮಕ್ಕೆ ಎಲ್ಲಾ ಗ್ರಾಮಸ್ಥರು ಆಗಮಿಸಿ ಕಾರ್ಯಕ್ರಮವನ್ನು ವೀಕ್ಷಿಸಿ ತಂಡಗಳಿಗೆ ಪ್ರೋತ್ಸಾಹಿಸಿ ಮನರಂಜಸಿದರು. ವಿಜೇತರಾದ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯ ಎಲ್ಲಾ ವಿದ್ಯಾರ್ಥಿಗಳಿಗೆ ನೃತ್ಯ ಶಾಲಾ ಪೋಷಕವೃಂದಾದವರು ಅಭಿನಂದನೆ ಸಲ್ಲಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!