ಕುಶಾಲನಗರ, ಜು 16: ನವ ನಿರ್ಮಾಣ ಕಟ್ಟಡ ಕಟ್ಟುವವರ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಕರ್ನಾಟಕ ಸ್ಟೇಟ್ ಫೆಡರೇಶನ್ ನ ಕುಶಾಲನಗರ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಕುಶಾಲನಗರ ತಾಲೂಕು ಕಾರ್ಯ ಅಧ್ಯಕ್ಷರಾಗಿ ಕೂಡ್ಲೂರು ನವಗ್ರಾಮದ ಮಂಜು, ತಾಲೂಕು ಅಧ್ಯಕ್ಷರಾಗಿ ಕೂಡಿಗೆಯ ಕೆ.ಎಂ. ರಂಜಿತ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಕೂಡುಮಂಗಳೂರಿನ ಧರ್ಮೇಶ್ ವಿ ಎಸ್ ಮತ್ತು ಖಜಾಂಚಿಯಾಗಿ ರಾಜನಬಿಳಗುಲಿ ಗ್ರಾಮದ ಪ್ರಕಾಶಾಚಾರಿ ಅವರನ್ನು ನೇಮಕಗೊಳಿಸಲಾಗಿದೆ.
ಕೊಡಗು ಜಿಲ್ಲಾ ಐ.ಎನ್.ಟಿ.ಯು.ಸಿ ಅಧ್ಯಕ್ಷರಾದ ಬಿ.ಡಿ.ಅಣ್ಣಯ್ಯ ಅವರ ಸಲಹೆ ಮೇರೆಗೆ
ಕೋಲಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫೆಡರೇಶನ್ ರಾಜ್ಯಾಧ್ಯಕ್ಷರಾದ ಹೆಚ್.ಸಿ.ಶಾಮಣ್ಣ ರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಎಂ.ಯಲ್ಲಪ್ಪ ಅವರು ನೂತನ ಪದಾಧಿಕಾರಿಗಳನ್ನು ನೇಮಿಸಿ ಆದೇಶ ಪತ್ರ ವಿತರಿಸಿರುವುದಾಗಿ ತಾಲೂಕು ಕಾರ್ಯಾಧ್ಯಕ್ಷ ಮಂಜು ತಿಳಿಸಿದರು.
ಈಗಾಗಲೆ ತಾಲೂಕಿನಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದ್ದು ಪ್ರಾರಂಭಿಕ ಹಂತವಾಗಿ ಸುಮಾರು 40 ಕ್ಕೂ ಅಧಿಕ ಮಂದಿಯನ್ನು ಫೆಡರೇಷನ್ ಗೆ ಸದಸ್ಯರನ್ನಾಗಿ ಮಾಡಲಾಗುತ್ತಿದೆ ಎಂದು ತಾಲೂಕು ಅಧ್ಯಕ್ಷ ರಂಜಿತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಧರ್ಮೇಶ್, ಖಜಾಂಚಿ ಪ್ರಕಾಶಾಚಾರಿ ಅವರು ತಿಳಿಸಿದರು.
Back to top button
error: Content is protected !!