ಕ್ರೀಡೆ
ಜೈಭೀಮ್ ಕಪ್ ವಾಲಿಬಾಲ್ ಪಂದ್ಯಾಟ: ರಾಯಲ್ ಬಿರಿಯಾನಿ ತಂಡ ಚಾಂಪಿಯನ್

ಕುಶಾಲನಗರ, ಏ 07: ಹಳೆ ಕೂಡಿಗೆಯ ಶೈನಿಂಗ್ ಸ್ಟಾರ್ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ದ್ವಿತೀಯ ವರ್ಷದ ಜೈ ಭೀಮ್ ಕಪ್ ವಾಲಿಬಾಲ್ ಲೀಗ್ ನಲ್ಲಿ ಕುಶಾಲನಗರದ ರಾಯಲ್ ಬಿರಿಯಾನಿ ತಂಡ ಫೈನಲ್ ಪಂದ್ಯಾಟದಲ್ಲಿ ದಿಲೀಫ್ ಫ್ರೆಂಡ್ಸ್ ಬ್ಯಾಡಗೊಟ್ಟ ತಂಡವನ್ನು 2-1ಸೆಟ್ ಗಳ ಅಂತರದಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಇದರೊಂದಿಗೆ 30,000 ನಗದು ಮತ್ತು ಆಕರ್ಷಕ ಟ್ರೋಫಿ ಯನ್ನು ತನ್ನದಾಗಿಸಿಕೊಂಡಿತು.
ಕ್ರೀಡಾಕೂಟದಲ್ಲಿ ಎಂಟು ತಂಡಗಳ ಪಾಲ್ಗೊಂಡಿದ್ದವು.
ಫೈನಲ್ ಪಂದ್ಯಾಟಕ್ಕೂ ಮುನ್ನ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಭಾಗವಹಿಸಿ ಆಟಗಾರಿಗೆ ಶುಭ ಕೋರಿದರು.
ಇದೇ ಸಂದರ್ಭ ಕುಶಾಲನಗರ ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆದಂ. ಎಸ್, ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಅರುಣ್ ರಾವ್, ಕಾಂಗ್ರೆಸ್ ಮುಖಂಡರಾದ ಬಿ.ಡಿ. ಅಣ್ಣಯ ದಾನಿ ಬಾಷಾ, ಪತ್ರಕರ್ತರಾದ ನಾಗರಾಜ್ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.



