ಪೊಲೀಸ್

ಸಂಚಾರಿ ನಿಯಮ ಉಲ್ಲಂಘನೆ: ಪ್ರಕರಣ ದಾಖಲು

ಕುಶಾಲನಗರ, ಫೆ 22: ಅಪ್ರಾಪ್ತನಿಗೆ ಬೈಕ್ ಚಾಲನೆ ಮಾಡಲು ಅವಕಾಶ ಮಾಡಿಕೊಟ್ಟ ವಾಹನ ಮಾಲೀಕ ಅಪ್ರಾಪ್ತನ ತಂದೆ ಹಾಗೂ ಅಪ್ರಾಪ್ತ ಬಾಲಕನ‌ ಮೇಲೆ ಕುಶಾಲನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಂಧದಕೋಟಿಯ ಸುರೇಶ್ ಹಾಗೂ ಆತನ ಪುತ್ರ 16 ವರ್ಷದ ಸುಮಂತ್ ವಿರುದ್ದ ಪ್ರಕರಣ ದಾಖಲಾಗಿದೆ.
ಈ ಒಂದು ತಿಂಗಳಲ್ಲಿ
ಅಪ್ರಾಪ್ತ ಯುವಕರು ಬೈಕ್ ಚಲಾವಣೆ ಮಾಡಿದ ನಾಲ್ಕನೆ ಪ್ರಕರಣ ಇದಾಗಿದ್ದು, ಯಾರು ಕೂಡ ಅಪ್ರಾಪ್ತರಿಗೆ ಬೈಕ್ ನೀಡದಂತೆ ಪೊಲೀಸರು ಮನವಿ ಮಾಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಬೈಕ್ ವೀಲಿಂಗ್ ಮಾಡುತ್ತಿದ್ದ ಯುವಕನ ಮೇಲೆ ಕುಶಾಲನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸುಂಟಿಕೊಪ್ಪದ ಶೇಷಪ್ಪ ಎಂಬವರ ಪುತ್ರ ಹರ್ಷಿತ್ (21) ವಿರುದ್ದ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!