ಪ್ರತಿಭಟನೆ

ಬಲವಂತದ ಹಲಾಲ್ ಹೇರಿಕೆಗೆ ವಿರೋಧ: ಹಿಂದೂ ಜನಜಾಗೃತಿ ಸಮಿತಿಯಿಂದ ಪ್ರಧಾನಿಗೆ ಮನವಿ

ಕುಶಾಲನಗರ, ಅ 20: ಆಹಾರ ಪದಾರ್ಥಗಳನ್ನು ಹಲಾಲ್ ಮುಕ್ತವಾಗಿಸಲು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ತಹಶೀಲ್ದಾರ್ ಮುಖಾಂತರ ಶ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಬಾರಿ ಹಲಾಲ್ ಮುಕ್ತ ದೀಪಾವಳಿ ಆಚರಣೆ ಅಗತ್ಯವಿದೆ. ಬಲವಂತದ ಹಲಾಲ್ ಹೇರಿಕೆಗೆ ಕಡಿವಾಣ ಹಾಕಬೇಕಿದೆ. ಎಫ್ ಎಸ್ ಎಸ್ ಎ ಐ ಪ್ರಮಾಣೀಕೃತ ಹೊರತಾಗಿ ಧರ್ಮದ ಆಧಾರದಲ್ಲಿ ಹಲಾಲ್ ಪ್ರಮಾಣ ಪತ್ರ ನೀಡುವುದು ಹಾಗೂ ಈ ಹಲಾಲ್ ಪ್ರಮಾಣಪತ್ರವನ್ನು ಹಣ ಕೊಟ್ಟು ಪಡೆದುಕೊಳ್ಳುವ ಸಂಸ್ಥೆಗಳ ವಿಚಾರಣೆ ಅಗತ್ಯವಿದೆ. ಕೇವಲ‌ ಇಸ್ಲಾಂ‌ ಅನುಯಾಯಿಗಳಿಗೆ ಹಲಾಲ್ ಪದಾರ್ಥ ಒದಗಿಸುವುದರಲ್ಲಿ ಯಾವುದೇ ವಿರೋಧವಿಲ್ಲ. ಆದರೆ ತಿನ್ನುವ ಪ್ರತಿ ಆಹಾರದಲ್ಲಿ ಹಲಾಲ್ ಸರ್ಟಿಫಿಕೇಟಿಕೇಶನ್ ಇರಬಾರದು. ಇದಕ್ಕೆ ನಿಷೇದ ಹೇರಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ. ಕುಶಾಲನಗರದ ತಹಸೀಲ್ದಾರ್ ಕಛೇರಿ ಬಳಿ ಕಂದಾಯ ಅಧಿಕಾರಿ ಸಂತೋಷ್ ಅವರಿಗೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಈ ಸಂದರ್ಭ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭಾಸ್ಕರ ನಾಯಕ್,ಸಮಿತಿ ಪದಾಧಿಕಾರಿಗಳಾದ, ಬಿ.ಪಿ.ಕೃಷ್ಣಮೂರ್ತಿ, ಶ್ರೀನಾಥ್, ಪ್ರಸಾದ್, ಉಮಾಶ್ರೀನಾಥ್, ಲಕ್ಷ್ಮಿ ಹರೀಶ್, ಪ್ರಸನ್ನ ಮೊದಲಾದವರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!