ಕುಶಾಲನಗರ, ಜ 25: ವಿವಿಧ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ವೈಯಕ್ತಿಕ ಹಾಗೂ ಜಂಟಿ ಸಾಲವನ್ನು ನೀಡಿ ಸಾಲ ಮರು ಪಾವತಿ ಮಾಡುವ ಸಂದರ್ಭ ದೈಹಿಕ ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂಧನೆ ಮಾಡುವುದು ಹಾಗೂ ಸಮಯವಲ್ಲದ ಸಮಯದಲ್ಲಿ ಮನೆಗೆ ನುಗ್ಗಿ ಹೆದರಿಸಿರುವ ಕುರಿತು ಮಾಹಿತಿ ಬಂದಿರುತ್ತದೆ.
ಯಾವುದೇ ಖಾಸಗಿ ಹಣಕಾಸು ಸಂಸ್ಥೆಯವರು ಸಾಲ ಮರು ಪಾವತಿಗಾಗಿ ಜನರಿಗೆ ಹಲ್ಲೆ ನಡೆಸುವುದು. ಅವಾಚ್ಯ ಶಬ್ದಗಳಿಂದ ನಿಂಧಿಸುವುದು ಮತ್ತು ಮನೆಗೆ ನುಗ್ಗಿ ಹೆದರಿಸುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಯಾವುದೇ ಖಾಸಗಿ ಹಣಕಾಸು ಸಂಸ್ಥೆಯವರು ಸಾಲ ಮರು ಪಾವತಿಗಾಗಿ ಹಲ್ಲೆ ಮಾಡುವುದು, ಜಗಳ ಮಾಡುವುದು ಮತ್ತು ಸಮಯವಲ್ಲದ ಸಮಯದಲ್ಲಿ ಮನೆಗೆ ನುಗ್ಗಿ ಹೆದರಿಸುವುದು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ತುರ್ತು ಸಹಾಯವಾಣಿ-112 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮತ್ತು ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಕೋರುತೇವೆ. ಅಕ್ರಮ ಚಟುವಟಿಕೆಗಗಳ ಕುರಿತು ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ.
Back to top button
error: Content is protected !!