ಕುಶಾಲನಗರ, ಡಿ 28: ನಿನ್ನೆ ಕಟ್ಟೆಮಾಡುವಿನಲ್ಲಿ ಕೆಲವು ಕಿಡಿಗೇಡಿಗಳು ಕೊಡವರ ಸಾಂಪ್ರದಾಯಿಕ ಉಡುಪು ಧರಿಸಿ ದೇವಾಲಯದ ವಾರ್ಷಿಕ ಉತ್ಸವದಲ್ಲಿ ಭಾಗವಹಿಸದಂತೆ ತಡೆದಿರುವುದು ಈ ದೇಶದ ಸಂವಿಧಾನದಲ್ಲಿ ಕೊಡಮಾಡಲ್ಪಟ್ಟಿರುವ ಮೂಲಭೂತ ಹಕ್ಕುಗಳ ಸ್ಪಷ್ಟ ನಿರಾಕರಣೆಯಾಗಿದೆ. ದೇವಾಲಯಗಳಿಗೆ ತುಂಡು ಉಡುಗೆ ಧರಿಸಿ ಬರದಂತೆ ನೀತಿಗಳನ್ನು ಒಂದೆಡೆ ರೂಪಿಸುತ್ತಿದ್ದರೆ ಇನ್ನೊಂದೆಡೆ ಸಾವಿರಾರು ವರ್ಷಗಳಿಂದ ಕೊಡವರು ಪಾಲಿಸಿಕೊಂಡು ಬರುತ್ತಿರುವ ಗೌರವ ಪೂರ್ವಕವಾದ ಧಿರಿಸನ್ನು ನಿರಾಕರಿಸುವುದು ಅತ್ಯಂತ ಹೇಯ! ಮುಂದೊಂದು ದಿನ ಇನ್ನೂ ಅಪಾಯಕಾರಿ ನಿಯಮಾವಳಿಗಳನ್ನು ಹೇರುವುದರಲ್ಲಿ ಆಶ್ಚರ್ಯವೇನಿಲ್ಲ!
ಸಾವಿರಾರು ಭಕ್ತರಿಂದ ದೇಣಿಗೆ ಸಂಗ್ರಹಿಸಿ ನಿರ್ಮಾಣಗೊಂಡ ದೇಗುಲಕ್ಕೆ ಪ್ರವೇಶ ನಿರಾಕರಣೆ ಅಕ್ಷಮ್ಯ ಅಪರಾದವಾಗಿದ್ದು, ಸಾರ್ವಜನಿಕ ದೇಣಿಗೆಯಿಂದ ನಿರ್ಮಾಣಗೊಂಡ ದೇಗುಲ ಸಮುದಾಯವೊಂದಕ್ಕೆ ಪ್ರವೇಶ ನಿರಾಕರಿಸಿರುವುದರಿಂದ ಸರಕಾರ ಮಧ್ಯ ಪ್ರವೇಶಿಸಿ ತಕ್ಷಣ ದೇವಾಲಯವನ್ನು ಮುಜರಾಯಿ ಸುರ್ಪದಿಗೆ ಪಡೆಯಬೇಕು.
ದೇಗುಲ ಪ್ರವೇಶಕ್ಕೆ ಮುಂದಾದವರ ಮೇಲೆ ಹಲ್ಲೆ ನಡೆಸಿದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
ಕೆಲವೆ ಕೆಲವು ಕಿಡಿಗೇಡಿಗಳ ಕೃತ್ಯವನ್ನು ಕೊಡಗಿನ ಜನ ಒಕ್ಕೊರಲಿನಿಂದ ಖಂಡಿಸುವುದರೊಂದಿಗೆ ಶಾಂತಿ ಮತ್ತು ಸಂಯಮವನ್ನು ಕಾಪಾಡಿಕೊಳ್ಳುವುದರ ಮೂಲಕ ನಿರ್ಧಿಷ್ಠ ಕಾರ್ಯಸೂಚಿಯ ಸಂಘಟನೆಗಳ ಹುನ್ನಾರವನ್ನು ವಿಪಲಗೊಳಿಸಬೇಕೆಂದು ಈ ಮೂಲಕ ಸಮಸ್ತ ಕೊಡಗಿನ ಜನರಲ್ಲಿ ಪ್ರಾರ್ಥಿಸುತ್ತೇನೆ.
ನಾಪಂಡ ಮುತ್ತಪ್ಪ
Back to top button
error: Content is protected !!